ಸಿಐಐ ದಕ್ಷಿಣ ವಿಭಾಗಕ್ಕೆ ನೂತನ ಅಧ್ಯಕ್ಷರಾಗಿ ಕಮಲಾ ಬಾಲಿ ಆಯ್ಕೆ

ಬೆಂಗಳೂರು

   ಬೆಂಗಳೂರಿನ ವೋಲ್ವೋ ಗ್ರೂಪ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧ್ಯಕ್ಷರಾದ ಕಮಲಾ ಬಾಲಿ ಅವರು ಸಿಐಐ ದಕ್ಷಿಣ ವಿಭಾಗಕ್ಕೆ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಕಮಲಾ ಬಾಲಿ ಅವರು ಸಿಐಐ ಜೊತೆ ಹಿಂದಿನಿAದಲೂ ನಿಕಟ ಸಂಬAಧ ಹೊಂದಿದ್ದರು. 2022-23ನೇ ಸಾಲಿನಲ್ಲಿ ಸಿಐಐ ದಕ್ಷಿಣ ವಿಭಾಗದ ಉಪಾಧ್ಯಕ್ಷರಾಗಿ ಹಾಗೂ 2017-18ನೇ ಸಾಲಿನಲ್ಲಿ ಸಿಐಐ ಕರ್ನಾಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2020-21ರಲ್ಲಿ ಸಿಐಐ-ಎಸ್‌ಆರ್ನ ಉತ್ಪಾದನಾ ಉಪಸಮಿತಿಯ ಅಧ್ಯಕ್ಷರಾಗಿ ಹಾಗೂ 2019-20ರಲ್ಲಿ ಸಿಐಐ ದಕ್ಷಿಣ ವಿಭಾಗದ ಉದ್ಯಮಿಗಳು ಹಾಗೂ ಸ್ಟಾರ್ಟ್ ಅಪ್ ಫೋರಂನ ಸಹ-ಅಧ್ಯಕ್ಷರಾಗಿದ್ದರು. ಸಿಐಐ ನ್ಯಾಷನಲ್ ಕೌನ್ಸಿಲ್ನ ಸದಸ್ಯರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.

    ಬಾಲಿ ಅವರು ವಿವಿಧ ಪ್ರತಿಷ್ಟಿತ ಸಂಸ್ಥೆಗಳ ಉನ್ನತ ಹುದ್ದಗಳನ್ನು ಅಲಂಕರಿಸಿದ್ದಾರೆ. ವೋಲ್ವೋ ಫೈನಾನ್ಶಿಯಲ್ ಸರ್ವಿಸಸ್ ಹಾಗೂ ಇನ್ವೆಸ್ಟ್ ಕರ್ನಾಟಕ ಫೋರಂನ ಬೋರ್ಡ್ ಸದಸ್ಯರಾಗಿ, ಭಾರತ ಸರ್ಕಾರದ ಡಿಪಾರ್ಟೆ್ಮಂಟ್ ಆಫ್ ಸ್ಪೇಸ್ ಬೋರ್ಡ್ನ ಸ್ವತಂತ್ರ ನಿರ್ದೇಶಕರಾಗಿ, ಗಾಂಧಿನಗರದ ಇಂಡಿಯನ್ ಇಸ್ಟಿಟ್ಯೂಟ್ನ ಬೋರ್ಡ್ ಆಫ್ ಗವರ್ನರ್ಸ್ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಕೊಯಂಬತ್ತೂರಿನ ಚಂದ್ರ ಟೆಕ್ಸ್‌ ಟೈಲಸ್‌ ಪ್ರೈಲಿ.ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಆರ್.ನಂದಿನಿ ಸಿಐಐ ದಕ್ಷಿಣ ವಿಭಾಗಕ್ಕೆ 2023-24ನೇ ಸಾಲಿನ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಪ್ರಸ್ತುತ ಸಿಐಐ ದಕ್ಷಿಣ ವಿಭಾಗ ಕೌನ್ಸಿಲ್ನ ಸದಸ್ಯರಾಗಿ ಹಾಗೂ ಸಿಐಐ ನ್ಯಾಷನಲ್ ಕೌನ್ಸಿಲ್ ಟಾಸ್ಕ್ ಫೋರ್ಸ್ (ಗ್ರಾಮೀಣಾಭಿವೃದ್ಧಿ ಹಾಗೂ ವಲಸೆ ಕಾರ್ಮಿಕರ ಅಭಿವೃದ್ಧಿ) ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2022-23ರಲ್ಲಿ ಇವರು ಶಿಕ್ಷಣ ಉಪವಿಭಾಗದ ನಿಕಟಪೂರ್ವ ಅಧ್ಯಕ್ಷರಾಗಿ, 2010-11ರಲ್ಲಿ ಸಿಐಐ ತಮಿಳುನಾಡಿನ ನಿಕಟಪೂರ್ವ ಅಧ್ಯಕ್ಷರಾಗಿ ಹಾಗೂ ಸಿಐಐ ಇಂಡಿಯನ್ ವುಮೆನ್ ನೆಟ್ವರ್ಕ್ನ ಮಾಜಿ ಚೇರ್ವುಮೆನ್ ಕಾರ್ಯನಿರ್ವಹಿಸಿದ್ದರು.

    ನಂದಿನಿ ಅವರು ಕಾಗ್ನಿಝೆಂಟ್ ಸಂಸ್ಥೆಯ ಸಿಎಸ್‌ಆರ್ ವಿಭಾಗವಾದ ಕಾಗ್ನಿಝೆಂಟ್ ಫೌಂಡೇಶನ್ ಬೋರ್ಡ್ನ ನಿರ್ದೇಶಕರಾಗಿದ್ದಾರೆ. ಜೊತೆಗೆ ತಮಿಳುನಾಡು ಇಂಡಸ್ಟಿçಯಲ್ ಡೆವಲಪ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ನ ಸ್ವತಂತ್ರ ನಿರ್ದೇಶಕರಾಗಿ ಹಾಗೂ ತಿರುಚನಾಪಳ್ಳಿಯ ಎನ್‌ಐಟಿ ಬೋರ್ಡ್ ಆಫ್ ಗವರ್ನರ್ ನ ಸದಸ್ಯರಾಗಿ ಸೇವೆ ಸಲ್ಲಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap