ಬೆಂಗಳೂರು :
ನಾಳೆ ಬೆಂಗಳೂರು ಸೇರಿ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಲಿದೆ. ಇದಕ್ಕೆ ಕಾರಣ ರೈತರ ಪ್ರತಿಭಟನೆ. ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು ರಸ್ತೆಗೆ ಇಳಿಯಲಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ. ರಾಜ್ಯದಲ್ಲಿ ಒಟ್ಟು 8 ಕಡೆಗಳಲ್ಲಿ ರೈತರು ರಸ್ತೆ ತಡೆ ನಡೆಸುವ ಆಲೋಚನೆ ಹಾಕಿಕೊಂಡಿದ್ದಾರೆ.
1. ಬೊಮ್ಮಸಂದ್ರ ಹೈವೆ
2. ದೇವನಹಳ್ಳಿ ಟೋಲ್ ಎಂಟ್ರೆನ್ಸ್
3. ಚಿಕ್ಕಬಳ್ಳಾಪುರ ಟೋಲ್ ಎಂಟ್ರೆನ್ಸ್
4. ತುಮಕೂರು
5. ಕೋಲಾರ
6. ಚಿತ್ರದುರ್ಗ
7. ಅನೇಕಲ್
8. ಹಾವೇರಿ
ಸರ್ಕಾರ 2013ರಲ್ಲಿ ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದಿತ್ತು. ಈ ಕಾಯ್ದೆ ಪ್ರಕಾರ ಜಮೀನು ಪಡೆಯುವಾಗ ರೈತರ ಅನುಮತಿ ಪಡೆದು ಭೂಸ್ವಾಧೀನ ಮಾಡಬೇಕು. ಅವರಿಗೆ ನೀಡಿದ ಹಣ ತೃಪ್ತಿಕರವಾಗಿರಬೇಕು. ಒಂದು ವೇಳೆ ಆಗದೆ ಇದ್ದರೆ ಅವರಿಗೆ ನ್ಯಾಯಲಯದ ಮೊರೆ ಹೋಗಬಹುದಾಗಿತ್ತು. ಆದರೆ, ಆದರೆ ಈಗ ಈ ಕಾಯ್ದಯೆನ್ನು ಸರ್ಕಾರ ಬದಲಾಯಿಸಿದೆ. ಸಾಲ ಮನ್ನಾದ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲದಿರುವುದು ಹಾಗೂ ಬರಗಾಲದ ಸಮಸ್ಯೆ ನೀಗಿಸುವಲ್ಲಿ ಸರ್ಕಾರ ವಿಫಲ ಆಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
