ಒಂದಂಕಿ ಗಳಿಕೆ ಮಾಡಿದ 300 ಕೋಟಿ ರೂ. ಬಜೆಟ್​ನ ‘ಕಣ್ಣಪ್ಪ’ ಚಿತ್ರ….!

ತೆಲಂಗಾಣ :

    ವಿಷ್ಣು ಮಂಚು ನಟಿಸಿ ನಿರ್ಮಿಸಿರೋ ‘ಕಣ್ಣಪ್ಪ’ ಸಿಇಮಾ ಜೂನ್ 27ರಂದು ರಿಲೀಸ್ ಆಯಿತು. ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ಲೆಕ್ಕ ಸಿಕ್ಕಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಕೇವಲ 9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಪ್ಯಾನ್ ಇಂಡಿಯಾ ಚಿತ್ರ. ಜೊತೆಗೆ ಈ ಸಿನಿಮಾದ ಬಜೆಟ್ 300 ಕೋಟಿ ರೂಪಾಯಿಗೂ ಅಧಿಕವಾಗಿದೆ. ಸದ್ಯ ಈ ವಿಚಾರ ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ.

 
     ‘ಕಣ್ಣಪ್ಪ’ ಸಿನಿಮಾ ಪೌರಾಣಿಕ ವಿಚಾರವನ್ನು ಹೇಳಲಾಗಿದೆ. ಆದರೆ, ಇದರಲ್ಲಿ ರೊಮ್ಯಾಂಟಿಕ್ ಟ್ರ್ಯಾಕ್​ ಮೇಲೆ ಹೆಚ್ಚು ಗಮನ ಹರಿಸಲಾಗಿದೆ. ಭಾವನಾತ್ಮಕ ವಿಚಾರಗಳನ್ನು ಸರಿಯಾಗಿ ಹೇಳಲು ನಿರ್ದೇಶಕರು ವಿಫಲವಾಗಿದ್ದಾರೆ. ಬೇಕಾಬಿಟ್ಟಿ ಆ್ಯಕ್ಷನ್ ದೃಶ್ಯಗಳನ್ನು ಇಡಲಾಗಿದ್ದು, ಫೈಟ್​ಗೂ ಸಿನಿಮಾಗೂ ಯಾವುದೇ ಸಂಬಂಧವೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದು ಸಿನಿಮಾಗೆ ದೊಡ್ಡ ಹಿನ್ನಡೆಯನ್ನು ಉಂಟು ಮಾಡಿದೆ.
    ‘ಕಣ್ಣಪ್ಪ’ ಸಿನಿಮಾ ತೆಲುಗು ಜೊತೆ ತಮಿಳು, ಕನ್ನಡ ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ವಿಷ್ಣು ಮಂಚು ಜೊತೆ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್​ಲಾಲ್ ಮೊದಲಾದವರು ನಟಿಸಿದ್ದಾರೆ. ಆದಾಗ್ಯೂ ಸಿನಿಮಾ ಉತ್ತಮ ಗಳಿಕೆ ಮಾಡಲು ವಿಫಲವಾಗಿದೆ. ಭಾರತದ ಬಾಕ್ಸ್ ಆಫೀಸ್​ನಲ್ಲಿ ಚಿತ್ರದ ಗಳಿಕೆ ಕೇವಲ 9 ಕೋಟಿ ರೂಪಾಯಿ. 

   ‘ಕಣ್ಣಪ್ಪ’ ಸಿನಿಮಾ ಬುಕ್ ಮೈ ಶೋನಲ್ಲೂ ಅಂಥ ಉತ್ತಮ ರೇಟಿಂಗ್ ಏನೂ ಪಡೆದಿಲ್ಲ. ಚಿತ್ರಕ್ಕೆ ಸದ್ಯ 7.5 ರೇಟಿಂಗ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಏರಿಕೆ ಕಂಡರೆ ನಿರ್ಮಾಪಕರ ಮೊಗದಲ್ಲಿ ನಗು ಮೂಡಲಿದೆ. ಇಲ್ಲವಾದಲ್ಲಿ ನಿರ್ಮಾಪಕರಿಗೆ ಭಾರೀ ನಷ್ಟ ಉಂಟಾಗಲಿದೆ.

Recent Articles

spot_img

Related Stories

Share via
Copy link