ನವದೆಹಲಿ :
ದ್ವೇಷಪೂರಿತ ಟ್ವೀಟ್ಗಳಿಗಾಗಿ ಸಾಕಷ್ಟು ನಿಂದನೆ, ದೂರುಗಳನ್ನು ಸಹ ಅವರು ಎದುರಿಸಿದ್ದಾರೆ. ಆದರೆ ಇದೀಗ ತಮ್ಮ ಸಿನಿಮಾದ ಕಾರಣಕ್ಕೆ ಕಂಗನಾ ರನೌತ್ಗೆ ಕೊಲೆ ಬೆದರಿಕೆಗಳು ಎದುರಾಗಿವೆ. ಕಂಗನಾ ರನೌತ್, ‘ಎಮರ್ಜೆನ್ಸಿ’ ಸಿನಿಮಾ ನಿರ್ಮಾಣ ಮಾಡಿದ್ದು, ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಆದರೆ ಸಿನಿಮಾ ಬಿಡುಗಡೆ ಮಾಡಬಾರದೆಂದು ಕೆಲವರು ಒತ್ತಾಯ ಮಾಡಿದ್ದು, ಕೊಲೆ ಬೆದರಿಕೆಗಳು ಸಹ ಬಂದಿವೆ.
ಅದೇ ವಿಡಿಯೋನಲ್ಲಿ ಇನ್ನೊಬ್ಬ ಪಂಜಾಬಿ ವ್ಯಕ್ತಿ ಮಾತನಾಡಿ, ‘ಸಿನಿಮಾದಲ್ಲಿ ಒಂದೊಮ್ಮೆ ಜರ್ನಲ್ ಸಿಂಗ್ ಬಿಂದಾರ್ನ್ವಾಲೆ ಅವರನ್ನು ಭಯೋತ್ಪಾದಕ ಎಂದು ನೀನು ತೋರಿಸಿದ್ದರೆ, ನೆನಪಿರಲಿ, ನೀನು ಯಾರ ಬಗ್ಗೆ ಸಿನಿಮಾ ಮಾಡುತ್ತಿದ್ದೀಯೋ ಅವರ ಗತಿ ಏನಾಯ್ತು ಎಂಬುದು (ಇಂದಿರಾ ಗಾಂಧಿ) ಅದೇ ಗತಿ ನಿನಗೂ ಆಗುತ್ತದೆ. ಅವರಿಗಾಗಿ ನಾವು ತಲೆ ಕಡಿಸಿಕೊಳ್ಳಲು ತಯಾರಿದ್ದೀವಿ ಹಾಗೆಯೇ ತಲೆ ಕಡಿಯಲು ಸಹ ತಯಾರಾಗುತ್ತೀವಿ’ ಎಂದಿದ್ದಾರೆ. ವಿಡಿಯೋನಲ್ಲಿ ನಟ, ರಾಜಕಾರಣಿ ಏಜಾಜ್ ಖಾನ್ ಸಹ ಇದ್ದಾರೆ. ಆದರೆ ಅವರು ಈ ಬಗ್ಗೆ ಏನೂ ಮಾತನಾಡಿಲ್ಲ.
ಸಿಖ್ ಸಮುದಾಯ, ಕಂಗನಾ ರನೌತ್ರ ‘ಎಮರ್ಜೆನ್ಸಿ’ ಸಿನಿಮಾಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇಂದಿರಾ ಗಾಂಧಿಯ ಹತ್ಯೆಯನ್ನು ಸಿಖ್ ಸಮುದಾಯಕ್ಕೆ ಸೇರಿದ ಅವರ ಬಾಡಿಗಾರ್ಡ್ಗಳೇ ಮಾಡಿದ್ದರು. ಇಂದಿರಾ ಗಾಂಧಿ, ‘ಬ್ಲೂ ಸ್ಟಾರ್ ಆಪರೇಷನ್’ ಮಾಡಿ ಅಮೃತ್ಸರದ ಗೋಲ್ಡನ್ ಟೆಂಪಲ್ನಲ್ಲಿ ನುಸುಳಿದ್ದ ಕೆಲವು ಪ್ರತ್ಯೇಕತವಾದಿಗಳನ್ನು ಕೊಲ್ಲಿಸಿದ್ದರು. ಇದೇ ಕಾರಣಕ್ಕೆ ಇಂದಿರಾ ಗಾಂಧಿಯವರ ಹತ್ಯೆ ಮಾಡಲಾಗಿತ್ತು. ಈಗ ಕಂಗನಾ, ಇಂದಿರಾ ಗಾಂಧಿಯ ಕುರಿತು ಸಿನಿಮಾದಲ್ಲಿ ‘ಬ್ಲೂ ಸ್ಟಾರ್ ಆಪರೇಷನ್’ ಘಟನೆಯ ಪ್ರಸ್ತಾಪ ಆಗಲಿದ್ದು, ಪ್ರತ್ಯೇಕವಾದಿಗಳನ್ನು ಭಯೋತ್ಪಾದಕರಂತೆ ತೋರಿಸುವ ಸಾಧ್ಯತೆ ಇರುವ ಕಾರಣ ಈ ಸಿನಿಮಾಕ್ಕೆ ಸಿಖ್ ಸಮುದಾಯದ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.