ಮತ್ತೆ ರಾಷ್ಟ್ರಪತಿ ಬಗ್ಗೆ ತಪ್ಪು ಮಾಹಿತಿ ನೀಡಿದ ಕಂಗನಾ ರಣಾವತ್…!

ನವದೆಹಲಿ:

   ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ತಮ್ಮ ಮುಂಬರುವ ಇಂದಿರಾ ಗಾಂಧಿಯವ ಸರ್ಕಾರದ ಆಡಳಿತವನ್ನು ಕುರಿತ ಚಿತ್ರ ಎಮರ್ಜೆನ್ಸಿ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.

   ಈ ವೇಳೆ ಅವರು ನೀಡಿದ ಸಂದರ್ಶನಗಳ ತುಣುಕುಗಳು ಟ್ರೋಲ್ ಆಗುತ್ತಿವೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಭಾರತದ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ರಾಮ್ ಕೋವಿಡ್ ಎಂದು ಕರೆದಿದ್ದಾರೆ. ದಲಿತ ರಾಷ್ಟ್ರಪತಿ ಎನ್ನುವ ಬದಲಾಗಿ ಗಲಿತ್ ರಾಷ್ಟ್ರಪತಿ ಎಂದು ಹೇಳಿ ನಂತರ ತಿದ್ದಿಕೊಂಡಿದ್ದಾರೆ. ಅಲ್ಲದೆ, ರಾಮನಾಥ್ ಕೋವಿಂದ್ (ರಾಮ್ ಕೋವಿಡ್) ಭಾರತದ ಮೊದಲ ದಲಿತ ರಾಷ್ಟ್ರಪತಿ ಎಂದು ತಪ್ಪು ಮಾಹಿತಿಯನ್ನೂ ಹೇಳಿದ್ದಾರೆ.

   ಈ ಬಗ್ಗೆ ಆನ್‌ಲೈನ್‌ನಲ್ಲಿ ಮೆಮ್ಸ್ ಫೆಸ್ಟ್ ಶುರುವಾಗಿದೆ. ಅಷ್ಟೇ ಅಲ್ಲ, ಕಂಗನಾ ರಣಾವತ್ ಅವರು ರಾಮನಾಥ್ ಕೋವಿಂದ್ ಭಾರತದ ಮೊದಲ ದಲಿತ ರಾಷ್ಟ್ರಪತಿ ಎಂದೂ ಹೇಳಿದ್ದಾರೆ. ಅದನ್ನು ಸರಿಪಡಿಸಿದ ಆ್ಯಂಕರ್ ಭಾರತದ ಮೊದಲ ದಲಿತ ರಾಷ್ಟ್ರಪತಿ ಕೆಆರ್ ನಾರಾಯಣನ್ ಎಂದು ಆಕೆಯನ್ನು ತಿದ್ದಿದಾಗ, “ನನ್ನ ತಪ್ಪು ಮಾಹಿತಿಗಾಗಿ ಕ್ಷಮಿಸಿ” ಎಂದು ತಕ್ಷಣವೇ ಒಪ್ಪಿಕೊಡಿದ್ದಾರೆ.

Recent Articles

spot_img

Related Stories

Share via
Copy link