ಮುಂಬೈ ಬಂಗಲೆ ಮಾರಿದ ಸಂಸದೆ ಕಂಗನಾ ….!

ಮುಂಬೈ : 

   ಕಂಗನಾ ರಣಾವತ್ ಅವರು ಸಿನಿಮಾ ಹಾಗೂ ರಾಜಕೀಯ ಬದುಕನ್ನು ಸರಿದೂಗಿಸಿಕೊಂಡು ಹೋಗುವ ಪ್ರಯತ್ನದಲ್ಲಿ ಇದ್ದಾರೆ. ಹೀಗಿರುವಾಗಲೇ ಅವರು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಬಂಗಲೆಯನ್ನು 32 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

   ಕಂಗನಾ ಅವರು ಬಾಂದ್ರಾದ ಪಾಲಿ ಹಿಲ್ ಭಾಗದಲ್ಲಿ 32 ಕೋಟಿ ರೂಪಾಯಿ ಮನೆ ಹೊಂದಿದ್ದರು. ಈ ವ್ಯವಹಾರ ಸೆಪ್ಟೆಂಬರ್ 5ರಂದು ಫೈನಲ್ ಆಗಿದೆ. ಇದನ್ನು ಕಂಗನಾ ಅವರು 2017ರಲ್ಲಿ 20 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದರು. ಈ ಕಟ್ಟಡ ಸುಮಾರು 3,075 ಚದರ ಅಡಿ ಇದೆ. 565 ಚದರ ಅಡಿ ಪಾರ್ಕಿಂಗ್ ಜಾಗ ಹೊಂದಿದೆ.

   ಶ್ವೇತಾ ಭತಿಜಾ ಎಂಬುವವರು ಈ ಕಟ್ಟಡವನ್ನು ಖರೀದಿ ಮಾಡಿದ್ದಾರೆ. ತಮಿಳು ನಾಡು ಮೂಲದ ಇವರು 1.92 ಕೋಟಿ ರೂಪಾಯಿ ಸ್ಟಾಂಪ್ ಡ್ಯೂಟಿ ಹಾಗೂ 30 ಸಾವಿರ ನೋಂದಣಿ ಶುಲ್ಕ ಪಾವತಿ ಮಾಡಿದ್ದಾರೆ. ಈ ಬಗ್ಗೆ ಕಂಗನಾ ಅವರು ಇನ್ನಷ್ಟೇ ಸಾರ್ವಜನಿಕವಾಗಿ ಹೇಳಿಕೊಳ್ಳಬೇಕಿದೆ.

   ಕಂಗನಾ ಅವರ ಈ ಕಟ್ಟಡ ಮೊದಲಿನಿಂದಲೂ ಚರ್ಚೆಯಲ್ಲಿ ಇತ್ತು. ಬೃಹತ್ ಮುನ್ಸಿಪಲ್ ಕಾರ್ಪೋರೇಷನ್ ಅವರು 2020ರಲ್ಲಿ ಈ ಕಟ್ಟಡದ ಒಂದು ಭಾಗವನ್ನು ಒಡೆದು ಹಾಕಿದ್ದರು. ಅಕ್ರಮವಾಗಿ ಕಟ್ಟಡ ನಿರ್ಮಾಣ ಆಗಿದೆ ಎನ್ನುವ ಆರೋಪದಲ್ಲಿ ಈ ಕಟ್ಟಡದ ಒಂದು ಭಾಗ ನಾಶ ಆಗಿತ್ತು. ಇದರ ಹಿಂದೆ ರಾಜಕೀಯ ಪ್ರೇರಣೆ ಇದೆ ಎಂದು ಕಂಗನಾ ಆರೋಪಿಸಿದ್ದರು. 

   ಕಂಗನಾ ನಟನೆಯ ‘ಎಮರ್ಜೆನ್ಸಿ’ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಸಿಗುತ್ತಿಲ್ಲ. ಇದು ಕಂಗನಾ ಬೇಸರಕ್ಕೆ ಕಾರಣ ಆಗಿದೆ. ಈ ಕಾರಣದಿಂದಲೇ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಈ ಚಿತ್ರಕ್ಕೆ ಯುಎ ಪ್ರಮಾಣಪತ್ರ ನೀಡಲಾಗಿದೆ ಎಂದು ಇತ್ತೀಚೆಗೆ ವರದಿ ಆಗಿತ್ತು. ಆದರೆ, ಮಂಡಳಿ ಇದನ್ನು ಅಧಿಕೃತವಾಗಿ ಹೇಳಿಲ್ಲ.

Recent Articles

spot_img

Related Stories

Share via
Copy link
Powered by Social Snap