ಬೆಂಗಳೂರು :
ಕುಡಿದ ಮತ್ತಿನಲ್ಲಿ ಸಿಗರೇಟ್ ವಿಚಾರವಾಗಿ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಸುನಾಮಿ ಕಿಟ್ಟಿ ಹಲ್ಲೆಮಾಡಿರುವ ಕೃತ್ಯ ಒರಾಯನ್ ಮಾಲ್ ಹೈ ಲಾಂಚ್ ಪಬ್‍ನಲ್ಲಿ ನಡೆದಿದೆ.
ಕಿಟ್ಟಿ ಸ್ನೇಹಿತರ ಜೊತೆ ಮದ್ಯಪಾನ ಮಾಡಲು ಬಂದಿದ್ದ. ಈ ವೇಳೆ ಸುನಾಮಿ ಕಿಟ್ಟಿ ಸಿಂಗಲ್ ಸಿಗರೇಟ್ ಕೇಳಿದ್ದಾನೆ. ಆಗ ಸಿಬ್ಬಂದಿ ಸಿಂಗಲ್ ಸಿಗರೇಟ್ ಸಿಗಲ್ಲ. ಪ್ಯಾಕ್ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಈ ವೇಳೆ ಸುನಾಮಿ ಕಿಟ್ಟಿ ಹಾಗೂ ಪಬ್ ಸಿಬ್ಬಂದಿ ನಡುವೆ ಗಲಾಟೆ ನಡೆದಿದ್ದು, ಕೋಪಗೊಂಡು ಹೈಲಾಂಚ್ ಪಬ್ ಸಿಬ್ಬಂದಿ ಮೇಲೆ ಕಿಟ್ಟಿ ಹಲ್ಲೆ ನಡೆಸಿದ್ದಾನೆ
ಅಪಹರಣ ಕೇಸ್‍ನಲ್ಲಿ ಜ್ಞಾನ ಭಾರತಿ ಠಾಣೆಯಲ್ಲಿ ಬಂಧಿತನಾಗಿದ್ದ ಕಿಟ್ಟಿ ಮತ್ತೆ ಪುಂಡಾಟ ಪ್ರದರ್ಶನ ಮಾಡಿದ್ದಾನೆ.
