ಮೋದಿ, ಶಾ, ದೋವಲ್ ಮೇಲೆ ದಾಳಿಗೆ ಉಗ್ರರ ಸ್ಕೆಚ್!!!

ದೆಹಲಿ :

      ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ, ಪ್ರಧಾನಿ ಮೋದಿ, ಗೃಹ ಸಚಿವ ಆಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಹತ್ಯೆಗೆ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

     ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಡುವ 370ನೇ ವಿಧಿ ರದ್ದತಿಯಿಂದ ಪಾಕಿಸ್ತಾನಿ ಉಗ್ರರು ಹತಾಶರಾಗಿದ್ದಾರೆ. ಆದ್ದರಿಂದ 370ನೇ ವಿಧಿ ರದ್ದು ಮಾಡಲು ಆದ್ಯತೆ ನೀಡಿದ ಮೋದಿ, ಶಾ ಹಾಗೂ ದೋವಲ್ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ. ಉಗ್ರ ಶಮ್ಮೇರ್ ವಾನಿ ಹಾಗೂ ಹ್ಯೂಂಡ್ಲರ್ ನಡುವೆ ಸಂಭಾಷಣೆ ಪ್ರಕಾರ ವ್ಯವಸ್ಥಿತ ದಾಳಿಗೆ ತಂಡ ರಚಿಸಲಾಗುತ್ತಿರುವ ಮಾಹಿತಿ ತಿಳಿದುಬಂದಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

     ಇತ್ತೀಚೆಗೆ ರಾಷ್ಟ್ರೀಯ ವಿಮಾನಯಾನ ಭದ್ರತಾ ಬ್ಯೂರೋಗೆ ಉಗ್ರರ ದಾಳಿಯ ಬಗ್ಗೆ ಅನಾಮಿಕ ಪತ್ರ ಬಂದಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಈ ಹಿನ್ನಲೆಯಲ್ಲಿ ಜಮ್ಮು , ಪಠಾಣ್ ಕೋಟ್ , ಅಮೃತಸರ, ಜೈಪುರ , ಗಾಂಧೀನಗರ, ಕಾನ್ಪುರ, ಲಕ್ನೋ ಸೇರಿದಂತೆ 30 ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap