15 ವರ್ಷಕ್ಕಿಂತ ಹಳೆಯ ವಾಹನಗಳು ಬ್ಯಾನ್ ….!!!?

ಬೆಂಗಳೂರು:

  ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ವಾಯುಮಾಲಿನ್ಯ ನಿಯಂತ್ರಣ ಮಂಡಳಿಯು ಸುಮಾರು 15 ವರ್ಷಗಳ ಹಳೆಯ ವಾಹನಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

  15 ವರ್ಷ ಮೀರಿದ ಹಳೆಯ ವಾಹನಗಳ ನಿಷೇಧವು ಸೇರಿದಂತೆ ಹಲವು ವಾಯು ಮಾಲಿನ್ಯ ನಿಯಂತ್ರಿಸುವ ಕಟ್ಟುನಿಟ್ಟು ಕ್ರಮಗಳ ಜಾರಿಗೊಳಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆದಿದೆ.

  ದೆಹಲಿ ಬಳಿಕ ವಾಯುಮಾಲಿನ್ಯದಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಂಡಳಿಯು ನಗರದಲ್ಲಿ 16 ಲಕ್ಷ ಹಳೆಯ ವಾಹನಗಳಿರುವುದನ್ನು ಗುರುತಿಸಿ ಅವುಗಳು ಹೊರಸೂಸುವ ವಿಷಕಾರಿ ಅನಿಲದಿಂದ ನಗರದಲ್ಲಿ ವಾಯುಮಾಲಿನ್ಯ ಉಂಟಾಗುತ್ತಿದೆ ಹೀಗಾಗಿ ಹದಿನೈದು ವರ್ಷಕ್ಕಿಂತ ಹಳೆಯ ಪೆಟ್ರೋಲ್ ಡೀಸೆಲ್ ವಾಹನಗಳ ಸಂಚಾರ ನಿಷೇಧಿಸುವಂತೆ ವರದಿ ನೀಡಿದೆ.

  ಡೀಸೆಲ್ ವಾಹನ ನಿಷೇಧ
ಈ ವರದಿಯನ್ನ ಕೆಎಸ್‍ಪಿಸಿಬಿ 2016 ರಲ್ಲೇ ಸರ್ಕಾರಕ್ಕೆ ನೀಡಿದರೂ ಇದನ್ನು ಜಾರಿಗೆ ತರಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಈಗ ಕೆಎಸ್‍ಪಿಸಿಬಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಹಳೆಯ ವಾಹನಗಳನ್ನು ನಿಷೇಧಿಸುವಂತೆ ಪತ್ರ ಬರೆಯಲಾಗಿದೆ ಎಂದು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದ್ದಾರೆ.

  ನಗರದಲ್ಲಿ 70 ಲಕ್ಷ ವಾಹನಗಳಿದ್ದು, 32,000 ವಾಹನಗಳ ಹೊಗೆ ತಪಾಸಣೆಯನ್ನ ಮಾಲಿನ್ಯ ನಿಯಂತ್ರಣ ಮಂಡಳಿ ಮಾಡಿಸಿದೆ. ಇದರಲ್ಲಿ 14% ಪೆಟ್ರೋಲ್ ವಾಹನಗಳು ಹಾಗೂ 25% ಡೀಸೆಲ್ ವಾಹನಗಳಿಂದ ವಿಷಕಾರಿ ಅನಿಲ ಬರುತ್ತಿರುವುದು ಗಮನಿಸಲಾಗಿದೆ. ಇವುಗಳಿಂದ ಹೊರಸೂಸುವ ಗಾಳಿಯ ಮಟ್ಟ ರಾಷ್ಟ್ರೀಯ ಮಾನದಂಡಕ್ಕಿಂತ ಕಡಿಮೆ ಇರುವುದು ಗೊತ್ತಾಗಿದೆ. ಪ್ರಮುಖ 48 ಅಂಶಗಳನ್ನು ಕಾರ್ಯೋನ್ಮುಖ ಮಾಡಲು ಚರ್ಚೆ ನಡೆಯುತ್ತಿದ್ದು, ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಹೆಚ್ಚಿಸಲು ಹಾಗೇ ಪಾರ್ಕಿಂಗ್ ಶುಲ್ಕ ಹೆಚ್ಚಿಸುವಂತೆಯೂ ಮಂಡಳಿ ವರದಿ ನೀಡಿದೆ.

  ರಿಂಗ್ ರಸ್ತೆಗೆ ಬೃಹತ್ ವಾಹನ
ನಗರದಲ್ಲಿ ಬೃಹತ್ ಗಾತ್ರದ ವಾಹನಗಳ ಸಂಚಾರಕ್ಕೆ ಕಡಿಮೆ ಮಾಡಿ ರಿಂಗ್ ರಸ್ತೆಗಳಲ್ಲಿ ಅವುಗಳನ್ನು ಸಂಚರಿಸಲು ಬದಲಾವಣೆ ಮಾಡಬೇಕು. ಕಾನೂನು ಮೀರಿದವರಿಗೆ ದೊಡ್ಡ ಪ್ರಮಾಣದ ದಂಡ ವಿಧಿಸಬೇಕು ಎಂದು ವರದಿ ಕೂಡಾ ನೀಡಿದೆ. ಪರಿಸರವಾದಿಗಳು ವರದಿಯನ್ನು ಸ್ವಾಗತಿಸಿವೆ ಎಂದು ಪರಿಸರವಾದಿ ಸುರೇಶ್ ಹೆಬ್ಬಳೀಕರ್ ತಿಳಿಸಿದ್ದಾರೆ.
15 ವರ್ಷಕ್ಕಿಂತ ಹಳೆಯ ವಾಹನಗಳನ್ನ ಉಪಯೋಗ ಮಾಡುವವರಿಗೆ ಮಾಲಿನ್ಯ ನಿಯಂತ್ರಣ

ಮಂಡಳಿ ಶಾಕಿಂಗ್ ನ್ಯೂಸ್ ನೀಡಿದ್ದು, ಸರ್ಕಾರ ನೂತನ ನಿಯಮ ತಂದಿದ್ದೇ ಆದಲ್ಲಿ ನಗರದಲ್ಲಿ ಹದಿನೈದು ಅಥವಾ 20 ವರ್ಷ ಹಳೆಯ ವಾಹನಗಳು ಗುಜುರಿ ಸೇರಲಿವೆ.

Recent Articles

spot_img

Related Stories

Share via
Copy link