ಮುಂಬೈ:
ರೈಲ್ವೆ ಹಳಿ ಪಕ್ಕದಲ್ಲಿ ಕುಳಿತುಕೊಂಡು ಆನ್ಲೈನ್ ಗೇಮ್ ‘ಪಬ್ ಜಿ’ ಆಡುತ್ತಿದ್ದ ಇಬ್ಬರು ಯುವಕರು ರೈಲಿನಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ಮಹರಾಷ್ಟ್ರದ ಹಿಂಗೋಲಿಯಲ್ಲಿ ನಡೆದಿದೆ.
ನಾಗೇಶ್ ಗೋರೆ(24) ಹಾಗೂ ಸ್ವಪ್ನಿಲ್ ಅನ್ನಪುರ್ಣೆ(22) ಪಬ್‍ಜಿ ಆಡುತ್ತಾ ಪ್ರಾಣ ಕಳೆದುಕೊಂಡ ಯುವಕರು. ನಾಗೇಶ್ ಹಾಗೂ ಸ್ವಪ್ನಿಲ್ ಪಬ್‍ಜಿ ಆಡುತ್ತಾ ರೈಲ್ವೆ ಹಳಿ ದಾಟುತ್ತಿದ್ದರು. ಆಟದಲ್ಲಿ ಮಗ್ನರಾಗಿದ್ದ ಇವರಿಗೆ ರೈಲು ಬರುವುದು ಗಮನಕ್ಕೆ ಬಂದಿರಲಿಲ್ಲ. ಹೀಗಾಗಿ ಈ ದುರ್ಘಟನೆ ಸಂಭವಿಸಿದೆ ಮುಂಬೈನಿಂದ 570 ಕಿ.ಮೀ ದೂರದಲ್ಲಿ ಘಟನೆ ಜರುಗಿದ್ದು, ತಡ ರಾತ್ರಿ ದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಣಾಮ ಇಬ್ಬರು ಮೃತಪಟ್ಟಿದ್ದು, ಇಬ್ಬರ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ. ಸ್ಥಳೀಯ ನಿವಾಸಿಗಳು ಅವರಿಬ್ಬರ ಮೃತದೇಹಗಳನ್ನು ತಡ ರಾತ್ರಿ ಅಲ್ಲಿ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ