ರೈಲಿನಲ್ಲಿ ಟಿಕೆಟ್ ಕೇಳಿದ ಟಿಟಿಗೆ ಚಾಕುವಿನಿಂದ ಇರಿತ!!

ಲಕ್ನೊ:

 

      ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರಿಬ್ಬರಿಗೆ ಟಿಕೆಟ್ ಕೇಳಿದ್ದಕ್ಕೆ ಕೋಪಗೊಂಡ ಅವರು, ಟಿಟಿಗೆ ಚಾಕುವಿನಿಂದ ತಿವಿದು ಹಲ್ಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ. 

      ಗೋರಖ್‌ಪುರ ಜಂಕ್ಷನ್‌ನಿಂದ ಸುಮಾರು 40 ಕಿ.ಮೀ ದೂರದಲ್ಲಿ ಕಪ್ತನ್‌ಗಂಜ್ ಸಮೀಪ ದೆಹಲಿಗೆ ತೆರಳುತ್ತಿದ್ದ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ಕೃತ್ಯ ಸಂಭವಿಸಿದೆ.  ಉತ್ತರ ಪ್ರದೇಶದ ಖುಷಿನಗರದಲ್ಲಿ ಈ ಘಟನೆ ನಡೆದಿದೆ.

      ಅಂಜನಿ ಕುಮಾರ್ (53) ಹಲ್ಲೆಗೊಳಗಾದ ಟಿಟಿ. ಅವರನ್ನು ಗೋರಖ್‌ಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

      ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಹಲ್ಲೆ ನಡೆಸಿದವರ ಮೇಲೆ ಯಾವುದೇ ದೂರು ದಾಖಲಾಗಿಲ್ಲ, ಆದರೆ ಅಂಜನ್ ಕುಟುಂಬಸ್ಥರು ಶೀಘ್ರವೇ ದೂರು ದಾಖಲಿಸಲಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ