300 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದ!!

ತಿರುಚಿರಪಳ್ಳಿ:

o

      ತಮಿಳುನಾಡಿನ ತಿರುಚಿರಪಳ್ಳಿಯ ನದುಕಟ್ಟುಪಟ್ಟಿಯಲ್ಲಿ ಎರಡು ವರ್ಷದ ಮಗುವೊಂದು 25 ಅಡಿಯ ಬೋರ್ ವೆಲ್ ಒಳಗೆ ಬಿದ್ದ ಘಟನೆ ಶುಕ್ರವಾರ ನಡೆದಿದೆ.

      2 ವರ್ಷದ ಬಾಲಕ ಸುಜಿತ್ ವಿಲ್ಸನ್ ಬಾವಿಗೆ ಬಿದ್ದ ಬಾಲಕ. ನಿನ್ನೆ ಸಂಜೆ ಸುಜಿತ್  ತನ್ನ ಮನೆಯ ಹೊರಗೆ ಆಟ ಆಡುತ್ತಿದ್ದಾಗ ಬೋರ್ ಬಾವಿಗೆ ಬಿದ್ದಿದ್ದಾನೆ. ಮಾಹಿತಿ ತಿಳಿದ ತಕ್ಷಣ ರಕ್ಷಣಾ ಪಡೆಗಳು ಸ್ಥಳಕ್ಕೆ ಆಗಮಿಸಿದ್ದು, ಬಾಲಕನನ್ನು ರಕ್ಷಿಸಲು ಹರಸಾಹಸ ಪಡುತ್ತಿವೆ. 

      ಈಗಾಗಲೇ ಮಗು ಕೊಳವೆ ಬಾವಿಗೆ ಬಿದ್ದು ೧೫ ಗಂಟೆ ಕಳೆದಿದ್ದು, 10 ಅಡಿ ಆಳದಲ್ಲಿ ಬಂಡೆ ಎದುರಾದ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯ ಸ್ಥಗಿತಗೊಳಸಲಾಗಿದೆ ಎನ್ನಲಾಗಿದೆ. ಮಗುವಿನ ಆರೋಗ್ಯವು ಉತ್ತಮವಾಗಿದ್ದರೂ, ಆತ ಭಯದಿಂದ ಅಳುತ್ತಿದ್ದಾನೆ ಎಂದು ರಕ್ಷಣಾ ತಂಡದ ಸಿಬ್ಬಂದಿ ತಿಳಿಸಿದ್ದಾರೆ. ಸದ್ಯ ಮೆಡಿಕಲ್ ತಂಡ ಸ್ಥಳದಲ್ಲಿದ್ದು, ಕೊಳವೆ ಬಾವಿಯೊಳಗೆ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap