ಭ್ರಷ್ಟಾಚಾರ ಆರೋಪ : ಕೇಂದ್ರದಿಂದ 22 ತೆರಿಗೆ ಅಧಿಕಾರಿಗಳ ಕಡ್ಡಾಯ ನಿವೃತ್ತಿ!!

ಹೊಸದಿಲ್ಲಿ:

     ಭ್ರಷ್ಟಾಚಾರದ ಆರೋಪದ ಮೇಲೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ 22 ಹಿರಿಯ ತೆರಿಗೆ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿದೆ.

      ಭ್ರಷ್ಟಾಚಾರ, ಇತರೆ ಗಂಭೀರ ಆರೋಪಗಳು ಹಾಗೂ ಸಿಬಿಐ ತನಿಖೆ ಎದುರಿಸುತ್ತಿರುವ ಸೂಪರಿಟೆಂಡೆಂಟ್​ ದರ್ಜೆಯ 22 ಹಿರಿಯ ಅಧಿಕಾರಿಗಳಿಗೆ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಸೀಮಾ ಸುಂಕ ಮಂಡಳಿ (ಸಿಬಿಐಸಿ) ಕಡ್ಡಾಯ ನಿವೃತ್ತಿ ನೀಡಿದೆ. 

      ಈ ಹಿಂದೆ ಜೂನ್ ತಿಂಗಳಿನಲ್ಲಿ ಸರಕಾರ ಮಂಡಳಿಯ 12 ಮಂದಿ ಅಧಿಕಾರಿಗಳೂ ಸೇರಿದಂತೆ 27 ಉನ್ನತ ಶ್ರೇಣಿಯ ಐಆರ್ ಎಸ್ ಅಧಿಕಾರಿಗಳನ್ನು ಇದೇ ರೀತಿ ಭ್ರಷ್ಟಾಚಾರದ ಆರೋಪದ ಮೇಲೆ ಕಡ್ಡಾಯವಾಗಿ ನಿವೃತ್ತಿಗೊಳಿಸಿತ್ತು.

      ಕೆ ಸಿ ಮಂಡಲ್, ಎಂ ಎಸ್ ದಾಮೊರ್, ಆರ್ ಎಸ್ ಗೊಗಿಯ, ಕಿಶೋರ್ ಪಟೇಲ್, ಜೆ ಸಿ ಸೋಳಂಕಿ, ಎಸ್ ಕೆ ಮಂಡಲ್, ಗೋವಿಂದ್ ರಾಮ್ ಮಾಲವಿಯ, ಎ ಯು ಛಪ್ಪರ್ಗರೆ, ಎಸ್ ಅಶೋಕ್ ರಾಜ್, ದೀಪಕ್ ಗಣೇಯನ್, ಪ್ರಮೋದ್ ಕುಮಾರ್, ಮುಕೇಶ್ ಜೈನ್, ನವನೀತ್ ಗೋಯಲ್, ಅಚಿಂತ್ಯ ಕುಮಾರ್ ಪ್ರಮಾಣಿಕ್, ವಿ ಕೆ ಸಿಂಗ್, ಡಿ ಆರ್ ಚತುರ್ವೇದಿ, ಡಿ ಅಶೋಕ್, ಲೀಲಾ ಮೋಹನ್ ಸಿಂಗ್ ಹಾಗೂ ವಿ ಪಿ ಸಿಂಗ್ ಕಡ್ಡಾಯವಾಗಿ ನಿವೃತ್ತರಾಗುವಂತೆ ಮಾಡಲಾದ ಅಧಿಕಾರಿಗಳು.

       ಈ ಅಧಿಕಾರಿಗಳು ಜಿಎಸ್‍ಟಿಗೆ ಸಂಬಂಧಿಸಿದ ಕೆಲಸ ಕಾರ್ಯ ನಿರ್ವಹಿಸುತ್ತಿದ್ದರು. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಗಳು ಉದ್ಯಮಿಗಳಿಗೆ ನೋಟಿಸ್​ ಅಥವಾ ಸಮನ್ಸ್​ ನೀಡಿ ಅವರಿಂದ ಹಣ ವಸೂಲಿ ಮಾಡುವುದನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link