ನೀರಿನಲ್ಲಿ ಟಿಕ್ ಟಾಕ್ ಗೀಳು : ಯುವಕನ ದುರಂತ ಸಾವು!!

ಹೈದರಾಬಾದ್​: 

        ಕೆರೆಯೊಂದರಲ್ಲಿ ಸ್ನಾನ ಮಾಡುವ ವೇಳೆ ಟಿಕ್ ಟಾಕ್ ವಿಡಿಯೋ ಮಾಡಲು ಹೋಗಿ ಯುವಕನೋರ್ವ ನೀರಿನಲ್ಲಿ ಮುಳುಗಿ ದುರಂತ ಸಾವಿಗೀಡಾಗಿರುವ ಘಟನೆ ಹೈದರಾಬಾದ್​ನ ಮೇಡ್ಚಲ್ ಜಿಲ್ಲೆಯ ದುಲಪಲ್ಲಿ ಕೆರೆಯಲ್ಲಿ ನಡೆದಿದೆ.

      ನರಸಿಂಹಲು(24) ಮೃತ ದುರ್ದೈವಿ. ನರಸಿಂಹ ತನ್ನ ಸ್ನೇಹಿತ ಪ್ರಶಾಂತ್‍ನೊಂದಿಗೆ ದುಲಪಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದನು. ನಂತರ ಇಬ್ಬರು ಟಿಕ್‍ಟಾಕ್ ವಿಡಿಯೋಗೆ ಪೋಸ್ ನೀಡಲು ಕೆರೆಗೆ ಇಳಿದಿದ್ದರು. 

      ಸ್ನೇಹಿತ ಪ್ರಶಾಂತ್ ಮೊಬೈಲ್ ಫೋನ್‍ನಲ್ಲಿ ಟಿಕ್‍ಟಾಕ್ ರೆಕಾರ್ಡ್ ಮಾಡುತ್ತಿದ್ದನು. ಬಳಿಕ ಪ್ರಶಾಂತ್‍ನೊಂದಿಗೆ ನೀರಿನಲ್ಲಿ ನಿಂತು ನರಸಿಂಹ ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿದ್ದನು. ಈ ವೇಳೆ ನರಸಿಂಹ ಪ್ರಶಾಂತ್‍ನಿಂದ ದೂರ ಹೋಗಿ ವಿಡಿಯೋಗೆ ಪೋಸ್ ನೀಡಿದ್ದಾನೆ. ಆಗ ನರಸಿಂಹ ಆಕಸ್ಮಿಕವಾಗಿ ನೀರು ಆಳವಾಗಿದ್ದ ಸ್ಥಳದಲ್ಲಿ ಜಾರಿ ಬಿದ್ದಿದ್ದು, ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾನೆ.

      ತಕ್ಷಣ ಗಾಬರಿಗೊಂಡ ಆತನ ಸೋದರ ಸಂಬಂಧಿ ಸ್ಥಳೀಯರಿಗೆ ಮಾಹಿತಿ ನೀಡಿ ಘಟನಾ ಸ್ಥಳಕ್ಕೆ ಕರೆದುಕೊಂಡು ಬರವಷ್ಟರಲ್ಲಿ ಆತ ಅಸುನೀಗಿದ್ದಾನೆ. ಮೃತ ಯುವಕನ ದೇಹವನ್ನು ಸ್ಥಳೀಯರು ಹೊರ ತೆಗೆದಿದ್ದಾರೆ.

      ಮೊಬೈಲ್​ ಆ್ಯಪ್​ ಟಿಕ್​​ಟಾಕ್​ ಗೀಳಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಆದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap