ನವದೆಹಲಿ :
ಈರುಳ್ಳಿ ಬೆಲೆ ಏರಿಕೆ ತಡೆಗಟ್ಟಲು ದೀಪಾವಳಿಗೂ ಮುನ್ನ 25,000 ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಭಾರತ ನಿರ್ಧರಿಸಿದೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಈ ಬಗ್ಗೆ ತಿಳಿಸಿದ್ದು, ದೇಶದಲ್ಲಿನ ಪೂರೈಕೆ ಪ್ರಮಾಣವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮತ್ತು ಗ್ರಾಹಕರ ಕೈಗೆಟುದ ಮಟ್ಟಕ್ಕೆ ತಲುಪಿದ ಬೆಲೆ ಏರಿಕೆಯನ್ನು ನಿಯಂತ್ರಿಸುವ ಸಲುವಾಗಿ ಖಾಸಗಿ ವ್ಯಾಪಾರಿಗಳು ಈಗಾಗಲೇ 7,000 ಟನ್ ಈರುಳ್ಳಿ ಆಮದು ಮಾಡಿಕೊಂಡಿದ್ದಾರೆ. ದೀಪಾವಳಿಗೂ ಮುನ್ನ 25,000 ಟನ್ ಈರುಳ್ಳಿ ದೇಶೀ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ ಎಂದಿದ್ದಾರೆ.
ಡಿಸೆಂಬರ್ ವರೆಗೆ ಈರುಳ್ಳಿ ಆಮದು ಮಾಡಿಕೊಳ್ಳಲು ಸರ್ಕಾರವು ನಿಯಮ ಸಡಿಲಿಕೆ ಮಾಡಿದೆ. ಈವರೆಗೆ 7,000 ಟನ್ ಈರುಳ್ಳಿಯನ್ನು ಖಾಸಗಿ ವ್ಯಾಪಾರಿಗಳು ಆಮದು ಮಾಡಿಕೊಂಡಿದ್ದಾರೆ. ದೀಪಾವಳಿಗೂ ಮುನ್ನ 25 ಸಾವಿರ ಟನ್ ಈರುಳ್ಳಿ ಬರುವ ನಿರೀಕ್ಷೆಯಿದೆ. ಮುಂದಿನ ತಿಂಗಳಿನಿಂದ ಮಂಡಿಗಳಲ್ಲಿ ಹೊಸ ಖಾರಿಫ್ ಬೆಳೆ ಆಗಮನ ಆಗುವುದರಿಂದ ಆಮದುಗಳ ಜೊತೆಗೆ ಪೂರೈಕೆ ಪರಿಸ್ಥಿತಿಯನ್ನು ಸುಧಾರಿಸಲಿದೆ. ಅಲ್ಲದೇ ಬೆಲೆಗಳ ಮೇಲಿನ ಒತ್ತಡವನ್ನು ಸಹ ಕಡಿಮೆ ಮಾಡಲಿದೆ ಎಂದಿದ್ದಾರೆ.
ಈರುಳ್ಳಿ ಬೆಲೆ ಏರಿಕೆ ಕೊರತೆಯನ್ನ ನೀಗಿಸಿ, ದೇಶೀಯ ಪೂರೈಕೆಯನ್ನು ಹೆಚ್ಚಿಸುವ ಮತ್ತು ಬೆಲೆ ಏರಿಕೆ ನಿಯಂತ್ರಿಸುವ ಸಲುವಾಗಿ ಸರ್ಕಾರ ಈ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ