ತಿರುಪ್ಪೂರ್ :
ಹುಟ್ಟುಹಬ್ಬ ಆಚರಿಸಲು ದೇವಸ್ಥಾನಕ್ಕೆ ತೆರಳಿದ್ದ ಒಂದೇ ಕುಟುಂಬದ ಮೂವರು ಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಪಲ್ಲಡಂ ಬಳಿ ನಡೆದಿದೆ.
ಮೃತರನ್ನು ಸೇತುಪತಿ (23), ಪತ್ನಿ ದೇವಿ (18) ಮತ್ತು ದೇವಿ ಸಹೋದರಿ ಶರಣ್ಯಾ (12) ಎಂದು ಗುರುತಿಸಲಾಗಿದೆ.
ಶರಣ್ಯಾಳ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಪಿಎಪಿ ಕಾಲುವೆ ಸಮೀಪವಿದ್ದ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದರು. ಈ ವೇಳೆ ಶರಣ್ಯಾ ಕಾಲುವೆಯಲ್ಲಿ ನೀರು ಮುಳುಗಲು ಬಯಸಿ, ಮನೆಯವರನ್ನು ದಡದಲ್ಲಿ ಕಾಯುವಂತೆ ಹೇಳಿ ಹೋಗಿದ್ದಾಳೆ. ಕಾಲುವೆ ಬಳಿ ಹೋಗುತ್ತಿದ್ದಂತೆ ಶರಣ್ಯಾ ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾಳೆ. ತಕ್ಷಣ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಇದನ್ನು ನೋಡಿದ ದೇವಿ ಮತ್ತು ಸೇತುಪತಿ ಸಹ ನೀರಿಗೆ ಜಿಗಿದಿದ್ದಾರೆ. ಆದರೆ,ಅವರೂ ಸಹ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ದಡದಲ್ಲಿದ್ದ ದೇವಿ ತಾಯಿ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿದಾಗ ಮಂಗಳವಾರ ಸಂಜೆವರೆಗೂ ಮೃತದೇಹಗಳು ಪತ್ತೆಯಾಗಲಿಲ್ಲ. ಕಾರ್ಯಚರಣೆ ಮುಂದುವರಿಸಿದ ಬಳಿಕ ಮೃತದೇಹಗಳು ಪತ್ತೆಯಾಗಿವೆ.
ಈ ಘಟನೆ ಕುರಿತು ಕಾಮನೈಕನ್ ಪಾಲಯಂ ಪೊಲೀಸರು ಅಸ್ವಾಭಾವಿಕ ಸಾವು ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ