ಕಾರಿನಲ್ಲಿ ಬೆಂಕಿ : ಮಕ್ಕಳ ಜೊತೆ ಮಹಿಳೆಯ ಸಜೀವ ದಹನ!

ನವದೆಹಲಿ:

        ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣದಲ್ಲಿಯೇ ಹೊತ್ತು ಉರಿದ ಪರಿಣಾಮ 35 ವರ್ಷ ವಯಸ್ಸಿನ ಮಹಿಳೆ ಹಾಗೂ ಅವರ ಇಬ್ಬರು ಪುತ್ರಿಯರು ಜೀವಂತ ದಹನರಾಗಿದ್ದಾರೆ. 

      ಅಕ್ಷರಧಾಮ ದೇವಾಲಯದ ಕಡೆಗೆ ಡಾಟ್ಸನ್‌ ಗೋ ಕಾರಿನಲ್ಲಿ ಮೂವರು ಮಕ್ಕಳನ್ನು ಒಳಗೊಂಡ ಕುಟುಂಬ ಪ್ರಯಾಣಿಸುತ್ತಿತ್ತು.  ಈ ಕಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿ ಉರಿದು ಅದರಲ್ಲಿದ್ದ ಮೂವರು ಜೀವಂತವಾಗಿ ಸುಟ್ಟು ಹೋಗಿದ್ದಾರೆ.

       ಕಾರಿನಲ್ಲಿ ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ ಕಾರು ಚಲಾಯಿಸುತ್ತಿದ್ದ ಉಪೇಂದ್ರ ಮಿಶ್ರಾ, ಮುಂದಿನ ಸೀಟಿನಲ್ಲಿ ಕುಳಿತಿದ್ದ ಒಬ್ಬಳು ಮಗಳೊಂದಿಗೆ ತಕ್ಷಣವೇ ಕಾರಿನಿಂದ ಹೊರ ಬಂದಿದ್ದಾರೆ. ಹಿಂಬದಿಯಲ್ಲಿ ಕುಳಿತಿದ್ದ ಹೆಂಡತಿ ಹಾಗೂ ಇಬ್ಬರು ಮಕ್ಕಳು ಬೆಂಕಿಯಿಂದ ತಪ್ಪಿಸಿಕೊಂಡು ಹೊರಬರಲಾರದೆ ಗುರುತು ಸಿಗದಷ್ಟು ಸುಟ್ಟು ಕರಕಲಾಗಿದ್ದಾರೆ.  

       ರಂಜನಾ ಮಿಶ್ರಾ ಹಾಗೂ ಅವರ ಪುತ್ರಿಯರಾದ ರಿಧಿ ಮತ್ತು ನಿಕ್ಕಿ ಸಾವಿಗೀಡಾದವರು.  ತಾಯಿ ಮತ್ತು ಮುದ್ದು ಮಕ್ಕಳು ಈ ರೀತಿ ದುರಂತ ಅಂತ್ಯ ಕಂಡಿದ್ದು ಎಂಥವರ ಹೃದಯವನ್ನು ಸಹ ಕಲಕುವಂತಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link