ಶಾಲೆಯಲ್ಲಿ ಆಕಸ್ಮಿಕ ಬೆಂಕಿ : ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ!!

ಫರೀದಾಬಾದ್ :

      ಬೆಂಕಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ 3 ಮಂದಿ ಮೃತಪಟ್ಟ ಘಟನೆ ರಾಜಧಾನಿ ದಿಲ್ಲಿ ಸಮೀಪದ ಫರೀದಾಬಾದ್ ನ ಖಾಸಗಿ ಶಾಲೆಯೊಂದರಲ್ಲಿ ಶನಿವಾರ ಸಂಭವಿಸಿದೆ.

      ಶಾಲೆಯ ಕಟ್ಟಡದಲ್ಲಿರುವ ಗೋದಾಮಿನಲ್ಲಿ ಬಟ್ಟೆಗೆ ಬೆಂಕಿ ಬಿದ್ದು ಕಟ್ಟಡ ಎಲ್ಲಡೆ ಆವರಿಸಿತು ಎನ್ನಲಾಗಿದೆ. ರಸ್ತೆಗಳು ಕಿರಿದಾಗಿದ್ದರಿಂದ ಅಗ್ನಿ ಶಾಮಕ ದಳದ ವಾಹನ ಬೇಗನೆ ಬರಲು ಸಾಧ್ಯವಾಗಿಲ್ಲ.

      ಇದರಿಂದಾಗಿ ಅದೇ ಕಟ್ಟಡದಲ್ಲಿ ವಾಸವಾಗಿದ್ದ  ಓರ್ವ ಶಿಕ್ಷಕಿ ಮತ್ತು ಆಕೆಯ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ದೇಹ ಸಂಪೂರ್ಣವಾಗಿ ಸುಟ್ಟಿದ್ದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.

      ಇನ್ನು ಕಟ್ಟಡದಲ್ಲಿ ಬೆಂಕಿ ದುರಂತದ ವೇಳೆ ಸಿಲುಕಿದ್ದ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಗ್ನಿಶಾಮಕ ಸಿಬ್ಬಂದಿ ಬರುವುದು ತಡವಾಯಿತು. ಅಷ್ಟರೊಳಗೆ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

      ಕಳೆದ ತಿಂಗಳಷ್ಟೇ ಗುಜರಾತಿನ ಸೂರತ್‌ನಲ್ಲಿ ಕೋಚಿಂಗ್ ಸೆಂಟರ್ ಒಂದಕ್ಕೆ ಬೆಂಕಿ ತಗುಲಿ ವಿದ್ಯಾರ್ಥಿಗಳು ಸೇರಿದಂತೆ 22 ಮಂದಿ ಮೃತಪಟ್ಟಿದ್ದರು. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap