ಲಕ್ನೋ :
ಬಿಸಿಯೂಟದ ಪಾತ್ರೆಗೆ ಬಿದ್ದು, ಮೂರು ವರ್ಷದ ಬಾಲಕಿ ಮೃತಪಟ್ಟಿರುವ ಘೋರ ಘಟನೆ ಮಿರ್ಜಾಪುರದ ಲಾಲ್‌ಗಂಜ್ ಪ್ರದೇಶದ ರಾಂಪುರ ಅತಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಸಾವನ್ನಪ್ಪಿದ ಬಾಲಕಿಯನ್ನು 3 ವರ್ಷದ ಅಂಚಲ್ ಎಂದು ಗುರುತಿಸಲಾಗಿದ್ದು, ಬಾಲಕಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೊಂದಿಕೊಂಡಿದ್ದ ಅಂಗನವಾಡಿ ಕೇಂದ್ರಕ್ಕೆ ದಾಖಲಾಗಿದ್ದಳು. ಶಾಲೆಯಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹಾಕಲಾಗಿತ್ತು. ಈ ವೇಳೆ ಓಡಿಬಂದ ಬಾಲಕಿಯ ಕಾಲು ಅದಕ್ಕೆ ತಾಗಿ ಎಡವಿ ಬಾಲಕಿ ಎದುರಿನಲ್ಲಿ ಆಹಾರ ತಯಾರಿಸುತ್ತಿದ್ದ ಪಾತ್ರೆಯೊಳಗೆ ಬಿದ್ದಿದ್ದಾಳೆ
Mirzapur: A 3-yr-old girl died in hospital after suffering burn injuries when she fell into a utensil which had freshly cooked midday meal,at a school in Rampur Atari village. Her father(in pic)says "Cooks had earphones on,they didn't notice&when they did they scurried away(03.2) pic.twitter.com/3zrLIvE2hB
— ANI UP (@ANINewsUP) February 3, 2020
ಕಂಟೇನರ್‌ಗೆ ಬಿದ್ದ ಮಗುವನ್ನು ಶಿಕ್ಷಕರು ಮತ್ತು ಅಡುಗೆಯವರು ಕೂಡಲೇ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಮಿರ್ಜಾಪುರದ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಶೇ 80ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಬಾಲಕಿಗೆ ಚಿಕಿತ್ಸೆ ಫಲಿಸದೆ ಸಂಜೆ 5 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾಳೆ.
ಘಟನೆ ಬಗ್ಗೆ ಮಾಧ‍್ಯಮಗಳ ಮುಂದೆ ಅಳಲು ತೋಡಿಕೊಂಡ ಬಾಲಕಿಯ ತಂದೆ, ಈ ವೇಳೆ ಬಿಸಿಯೂಟ ತಯಾರಿಸುತ್ತಿದ್ದ ವ್ಯಕ್ತಿ ಕಿವಿಗೆ ಇಯರ್ ಫೋನ್ ಹಾಕಿಕೊಂಡಿದ್ದ. ಹೀಗಾಗಿ ಬಾಲಕಿ ಬಿದ್ದಿದ್ದೂ ಗೊತ್ತಾಗಿಲ್ಲ ಎಂದು ಆರೋಪಿಸಿದ್ದಾರೆ.
ಮಿರ್ಜಾಪುರ ಜಿಲ್ಲಾಧಿಕಾರಿ ಸುಶೀಲ್ ಪಟೇಲ್ ಮಾತನಾಡಿ, ಶಾಲೆಯ ಮುಖ್ಯೋಪಾಧ್ಯಾಯರಾದ ಸಂತೋಷ್ ಕುಮಾರ್ ಯಾದವ್ ಅವರನ್ನು ಕೂಡಲೇ ಅಮಾನತುಗೊಳಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ