ಬಸ್​ಗೆ ಡಿಕ್ಕಿ ಹೊಡೆದ ಪ್ರಯಾಣಿಕರ ರೈಲು : 30 ಮಂದಿ ಸಾವು!!

ಸಿಂಧ್ :

      ವೇಗವಾಗಿ ಓಡುತ್ತಿದ್ದ ರೈಲು, ರೈಲ್ವೆ ಕ್ರಾಸಿಂಗ್ ಬಳಿ ಪ್ರಯಾಣಿಕರ ಬಸ್​ಗೆ ಡಿಕ್ಕಿ ಹೊಡೆದ ಪರಿಣಾಮ 30 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

      ಸುಕ್ಕೂರ್ ಜಿಲ್ಲೆಯ ರೋಹ್ರಿ ಪ್ರದೇಶದಲ್ಲಿ ಪಾಕಿಸ್ತಾನ ಎಕ್ಸ್‌ಪ್ರೆಸ್ ರೈಲು ಕರಾಚಿಯಿಂದ ರಾವಲ್ಪಿಂಡಿಗೆ ತೆರಳುತ್ತಿದ್ದಾಗ ಮಾನವರಹಿತ ರೈಲ್ವೆ ಕ್ರಾಸಿಂಗ್ ಬಳಿ ಪ್ರಯಾಣಿಕರ ಬಸ್​ಗೆ ಡಿಕ್ಕಿ ಹೊಡೆದಿದ್ದು ಬಸ್ ಮೂರು ತುಂಡಾಗಿದೆ ಎಂದು ವರದಿಯಾಗಿದೆ.

      ಘಟನೆಯಲ್ಲಿ 30 ಮಂದಿ ಸಾವನ್ನಪ್ಪಿದ್ದು, 60 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವಾರು ಗಾಯಾಳುಗಳು ಗಂಭೀರ ಸ್ಥಿತಿಯಲ್ಲಿರುವುದರಿಂದ ಸಾವು-ನೋವುಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

      ಗಾಯಗೊಂಡ 60ಕ್ಕೂ ಹೆಚ್ಚು ಜನರನ್ನು ಸುಕ್ಕೂರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap