ಕಂದಕಕ್ಕೆ ಉರುಳಿದ ಬಸ್‌ : 33 ಮಂದಿ ಸಾವು!!

ಜಮ್ಮು :

      ಗುಡ್ಡಗಾಡು ರಸ್ತೆಯಲ್ಲಿ ಮಿನಿ ಬಸ್‌ವೊಂದು ಆಳವಾದ ಕಂದರಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 33 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

      ಬಸ್ ಕೆಶ್ವಾನ್‌ನಿಂದ ಕಿಶ್ತ್ವಾರ್‌ಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಸಿರ್‌ಗ್ವಾರಿ ಎಂಬಲ್ಲಿ ಬೆಳಗ್ಗೆ 7:30ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ಸ್ಕಿಡ್ ಆಗಿ ಕಮರಿಗೆ ಉರುಳಿ ಬಿದ್ದಿದೆ.

       ಘಟನೆಯಲ್ಲಿ 33 ಮಂದಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ ಎಂದು ಕಿಶ್ತ್ವಾರದ ಜಿಲ್ಲಾಧಿಕಾರಿ ಅಂಗ್ರೇಜ್‌ ಸಿಂಗ್‌ ರಾಣ ಅವರು ತಿಳಿಸಿದ್ದಾರೆ.

       ಇದೀಗ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಈ ತನಕ 20 ಜನರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap