ದುಬೈ :
ಖಾಸಗಿ ಬಸ್ ಮತ್ತು ಭಾರೀ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸುಮಾರು 35 ಮಂದಿ ಮೆಕ್ಕಾ ಯಾತ್ರಿಕರು ಮೃತಪಟ್ಟಿರುವ ದುರ್ಘಟನೆ ಇಂದು ಪಶ್ಚಿಮ ಸೌದಿ ಆರೇಬಿಯಾದಲ್ಲಿ ನಡೆದಿದೆ.
ಬುಧವಾರ ಸಂಜೆ 7 ಗಂಟೆ ವೇಳೆಗೆ ಅಪಘಾತ ಸಂಭವಿಸಿದ್ದು, ಮೆಕ್ಕಾ ಮತ್ತು ಮದೀನ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಪಘಾತ ನಡೆದಿದೆ ಎಂದು ಸೌದಿ ಅರೇಬಿಯಾದ ಮದೀನ ಪ್ರಾಂತ್ಯದ ಪೊಲೀಸರು ಮಾಹಿತಿ ನೀಡಿದ್ದಾರೆ.
35 foreigners dead as bus crashes with excavator in Saudi Arabia, reports AFP quoting state media pic.twitter.com/GovAtj4mR0
— ANI (@ANI) October 17, 2019
ಮುಸ್ಲಿಮರ ಪವಿತ್ರ ನಗರವಾದ ಮೆಕ್ಕಾಗೆ ಪ್ರಯಾಣ ಬೆಳೆಸಲು 40ಕ್ಕೂ ಹೆಚ್ಚು ಯಾತ್ರಾರ್ಧಿಗಳು ಮದೀನಾ ಪ್ರದೇಶದ ಅಲ್-ಅಖಾಲ್ ಕೇಂದ್ರದಿಂದ ಖಾಸಗಿ ಚಾರ್ಟರ್ಡ್ ಬಸ್ನಲ್ಲಿ ಹೊರಟಿದ್ದರು. ಆದರೆ, ದಾರಿ ಮಧ್ಯೆ ಬಸ್ ಮತ್ತೊಂದು ಭಾರೀ ವಾಹನಕ್ಕೆ ಡಿಕ್ಕಿಯಾದ ಪರಿಣಾಮ 35 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೆ, 4 ಜನರ ಸ್ಥಿತಿ ಗಂಭೀರವಾಗಿದೆ ಅವರನ್ನು ಅಲ್-ಹಮ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಮೃತಪಟ್ಟವರಲ್ಲಿ ಏಷ್ಯಾದವರು ಮತ್ತು ಅರನ್ ರಾಷ್ಟ್ರದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/10/Mecca.gif)