ಗುಜರಾತ್:
3 ಅಂತಸ್ತಿನ ಕಟ್ಟಡ ಕುಸಿದ ಕಾರಣ 4 ಮಂದಿ ಮೃತಪಟ್ಟು ಹಲವರು ಅವಶೇಷಗಳಡಿ ಸಿಕ್ಕಿ ಗಾಯಗೊಂಡಿರುವ ಘಟನೆ ಗುಜರಾತಿನ ಖೇಡಾದಲ್ಲಿ ನಡೆದಿದೆ.
ಅಪಾರ್ಟ್ ಮೆಂಟ್ ಅನ್ನು ಗುಜರಾತ್ ವಸತಿ ಮಂಡಳಿ ನಿರ್ಮಾಣ ಮಾಡಿತ್ತು. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್‌ಡಿಆರ್‌ಎಫ್) ಜೊತೆಗೆ ನಾಡಿಯಾಡ್, ವಡೋದರಾ, ಆನಂದ್ ಮತ್ತು ಅಹಮದಾಬಾದ್‌ನ ಅಗ್ನಿಶಾಮಕ ಸಿಬ್ಬಂದಿ ತಂಡಗಳು ಸ್ಥಳದಲ್ಲಿದ್ದು ಇದುವರೆಗೆ ಎಂಟು ಜನರನ್ನು ರಕ್ಷಿಸಿದೆ.
ಈ ಪ್ರದೇಶಗಳಲ್ಲಿ ವಿಪರೀತವಾಗಿ ಸುರಿಯುತ್ತಿರುವ ಮಳೆಯೇ ಕಟ್ಟಡ ಕುಸಿಯಲು ಕಾರಣ ಎನ್ನಲಾಗಿದೆ.
#UPDATE Gujarat: 4 dead after a 3-storey apartment building in Pragatinagar, Nadiad collapsed, late last night. Rescue operations underway. More details awaited. pic.twitter.com/yhZyw8PfJm
— ANI (@ANI) August 10, 2019
ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈವರೆಗೆ 4 ರಿಂದ 5 ಜನರನ್ನ ರಕ್ಷಣೆ ಮಾಡಲಾಗಿದೆ. ಭಗ್ನಾವಶೇಷಗಳ ಅಡಿಯಲ್ಲಿ ಇನ್ನೂ ಜನರು ಸಿಕ್ಕಿಕೊಂಡಿರುವ ಶಂಕೆ ಇದ್ದು ಸ್ಥಳದಲ್ಲಿ ಆತಂಕ ಮನೆಮಾಡಿದೆ. ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
