ಕಂದಕಕ್ಕೆ ಉರುಳಿದ ಬಸ್ : ಸ್ಥಳದಲ್ಲೇ 6 ಪ್ರಯಾಣಿಕರ ಸಾವು!!!

ಗೋಲ್ ಪರ :

      ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಸ್ಥಳದಲ್ಲೇ 6 ಪ್ರಯಾಣಿಕರು ಮೃತಪಟ್ಟಿರುವ ಘಟನೆ ಅಸ್ಸೋಂನ ಗೋಲ್ ಪರ ಜಿಲ್ಲೆಯ ಕುಥಾಕುತಿ ಪ್ರದೇಶದ ದುಪ್ಪಾರ ಬಳಿ ನಡೆದಿದೆ.

      ಗುವಾಹಟಿಯಿಂದ ದುಬ್ರಿಗೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್​​ ಕಂಬಕ್ಕೆ ಡಿಕ್ಕಿ ಹೊಡೆದ ಬಸ್,​ ನಂತರ ಕಂದಕಕ್ಕೆ ಉರುಳಿದ್ದು, ಪರಿಣಾಮ 6 ಜನರು ಸಾವನ್ನಪ್ಪಿ ನಾಲ್ವರು ಗಾಯಗೊಂಡಿದ್ದಾರೆ.

      ಗಾಯಗೊಂಡವರನ್ನು ಗೋಲ್ ಪರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link