ನವದೆಹಲಿ :
ದೇಶದಲ್ಲಿ ಒಂದೇ ದಿನ 62,212 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 74 ಲಕ್ಷ ಗಡಿದಾಟಿದೆ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ 62,212 ಜನರಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 74,32,681ಕ್ಕೆ ಏರಿಕೆಯಾಗಿದೆ.
India reports a spike of 62,212 new #COVID19 cases & 837 deaths in the last 24 hours.
Total case tally stands at 74,32,681 including 7,95,087 active cases, 65,24,596 cured/discharged/migrated cases & 1,12,998 deaths: Ministry of Health and Family Welfare pic.twitter.com/mv0TpPRCey
— ANI (@ANI) October 17, 2020
ಇನ್ನು ಒಂದೇ ದಿನ 837ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ 1,12,998 ಕ್ಕೆ ತಲುಪಿದೆ. ಒಟ್ಟು 74,32,681 ಮಂದಿ ಸೋಂಕಿತರ ಪೈಕಿ ಈ ವರೆಗೂ 65,24,596 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಭಾರತದಲ್ಲಿನ್ನೂ 7,95,087 ಸಕ್ರಿಯ ಪ್ರಕರಣಗಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ