ಗುವಾಹತಿ :
ಅಸ್ಸಾಂ ರಾಜ್ಯದಲ್ಲಿ ಎಂಟು ನಿಷೇಧಿತ ಉಗ್ರಗಾಮಿ ಸಂಘಟನೆಗಳ 644 ಭಯೋತ್ಪಾದಕರು 117 ಶಸ್ತ್ರಾಸ್ತ್ರಗಳ ಸಮೇತ ಶರಣಾಗಿದ್ದಾರೆ.
ಅಸ್ಸಾಂ ರಾಜಧಾನಿ ಗುವಾಹತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಸರ್ವಾನಂದ ಸೊನೊವಾಲ್ ಅವರ ಸಮ್ಮುಖದಲ್ಲಿ ಒಟ್ಟು 644 ಉಗ್ರರು ಶರಣಾಗಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು,
ಉಲ್ಪಾ(ಐ), NDFB, RNLF, KLO, CPI (ಮಾವೋವಾದಿ), NSLA, ADF ಮತ್ತು NLFB ಸೇರಿದಂತೆ ಒಟ್ಟು 8 ನಿಷೇಧಿ ಭಯೋತ್ಪಾದನೆ ಸಂಘಟನೆಗಳ ಸದಸ್ಯರ 177 ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗತಿಯಾಗಿದ್ದಾರೆ.
ಬಂಡುಕೋರರು ಮತ್ತು ಉಗ್ರರನ್ನು ಸಮಾಜ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಇದೊಂದು ಅತ್ಯಂತ ಪ್ರಮುಖ ಬೆಳವಣಿಗೆಯಾಗಿದೆ. ಇಷ್ಟು ಸಂಖ್ಯೆ ಉಗ್ರಗಾಮಿಗಳು ಮತ್ತು ಬಂಡುಕೋರರು ಒಟ್ಟಿಗೆ ಶರಣಾಗಿರುವುದು ಇದೇ ಮೊದಲು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ