ಜನರನ್ನು ಬೆದರಿಸುತ್ತಿದ್ದ 8 ಮಂದಿ ಲಷ್ಕರ್​​​ ಉಗ್ರರ ಬಂಧನ!!!

ಶ್ರೀನಗರ:

      ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಸೋಪೂರ್‌ ನಲ್ಲಿ ಪಾಕಿಸ್ಥಾನ ಮೂಲದ 8  ಲಷ್ಕರ್​-ಎ-ತೋಯ್ಬಾ ಸಂಘಟನೆಯ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.

      ಬಂಧಿತ ಉಗ್ರರನ್ನು ಅಯಿಜಾಜ್​ ಮಿರ್, ಓಮರ್ ಮಿರ್, ತವ್​ಸೀಪ್​ ನಜರ್, ಇಮಿಟಿಯಾಜ್​ ನಜಾರ್, ಓಮರ್ ಅಕ್ಬರ್, ಫೈಜಾನ್​ ಲತೀಫ್​, ದಣೀಶ್​ ಹಬೀಬ್​ ಮತ್ತು ಶೋಕಾತ್ ಅಹಮದ್​ ಮಿರ್ ಎಂದು ಗುರುತಿಸಲಾಗಿದೆ. 

     ಈ ಉಗ್ರರು ಭಾರತೀಯ ಸೇನಾ ಪಡೆಗಳ ಕ್ಯಾಂಪ್‌ ಮೇಲೆ ದಾಳಿ ನಡೆಸಲು ಒಳನುಸುಳಿ ಬಂದಿದ್ದರು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

      ಉಗ್ರರು ಬಳಸಿದ್ದ ಕಂಪ್ಯೂಟರ್, ಪೋಸ್ಟರ್​​​​ಗಳ ತಯಾರಿಕೆಗೆ ಬಳಸಿದ್ದ ಇನ್ನಿತರ ಸಾಮಾಗ್ರಿಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap