ಟ್ರಕ್ ಗೆ ಎಸ್​ಯುವಿ ಕಾರು ಡಿಕ್ಕಿ ; ಬೆಳ್ಳಂಬೆಳಗ್ಗೆ 9 ಮಂದಿಯ ಧಾರುಣ ಸಾವು!!

ಆಗ್ರಾ : 

     ಸ್ಕಾರ್ಪಿಯೋ ಎಸ್ ಯುವಿ ಮತ್ತು ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಗುರುವಾರ ಮುಂಜಾನೆ ಆಗ್ರಾ- ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

     ರಾಷ್ಟ್ರೀಯ ಹೆದ್ದಾರಿ-2ರ ಆಗ್ರಾದ ಎತ್ಮಾದಪುರ ಪ್ರದೇಶದಲ್ಲಿ ಮುಂಜಾನೆ 5.15ರ ಸುಮಾರಿಗೆ ಈ ಅಪಘಾತ ನಡೆದಿದ್ದು,   ಸ್ಕಾರ್ಪಿಯೋ ವಾಹನದಲ್ಲಿ 12 ಜನರು ಪ್ರಯಾಣಿಸುತ್ತಿದ್ದರು. ಎತ್ಮಾದಪುರ ಕಡೆಯಿಂದ ಬರುತ್ತಿದ್ದ ಸ್ಕಾರ್ಪಿಯೋ ಕಾರು ರಸ್ತೆ ವಿಭಜಕದ ಮೇಲೆ ಮತ್ತೊಂದು ಬದಿಯ ರಸ್ತೆಗೆ ಹೋಗಿತ್ತು. ಆ ವೇಳೆ ಆಗ್ರಾ ಕಡೆಯಿಂದ ಬರುತ್ತಿದ್ದ ಟ್ರಕ್ ಗೆ ಢಿಕ್ಕಿ ಹೊಡೆದಿದೆ.

    ಅಪಘಾತದವಾದ ಕೂಡಲೇ ಸ್ಥಳೀಯರು ಕಾರಿನಲ್ಲಿ ಸಿಲುಕಿದವರ ರಕ್ಷಣೆಗೆ ಧಾವಿಸಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಎಂಟು ಮಂದಿ ಮೃತಪಟ್ಟಿದ್ದಾರೆ.

    ಸ್ಕಾರ್ಪಿಯೋ ಕಾರಿನ ಚಾಲಕ ನಿದ್ದೆಯ ಮಂಪರಿನ ಕಾರಣ ವಾಹನದ ನಿಯಂತ್ರಣ ಕಳೆದುಕೊಂಡ ಕಾರಣ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಸ್ಕಾರ್ಪಿಯೋ ನಜ್ಜುಗುಜ್ಜಾಗಿದೆ ಎಂದು ವರದಿಗಳು ತಿಳಿಸಿದೆ.

     ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap