2 ಸಾರಿಗೆ ಬಸ್​ಗಳ ಮುಖಾಮುಖಿ ಡಿಕ್ಕಿ: 6 ಮಂದಿ ದುರ್ಮರಣ!!

ಲಖನೌ :

      2 ಸಾರಿಗೆ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ನಡುವೆ ಅಪಘಾತ ಸಂಭವಿಸಿ 6 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಖನೌ-ಹಾರ್ಡೋಯ್ ರಸ್ತೆಯಲ್ಲಿ ನಡೆದಿದೆ.

      ಒಂದು ಬಸ್ ಹಾರ್ಡೋಯ್ ನಿಂದ ಲಖನೌಗೆ ಮತ್ತು ಇನ್ನೊಂದು ಬಸ್ ಹಾರ್ಡೋಯ್ ಗೆ ಹೊರಟಿತ್ತು.

      ಈ ವೇಳೆ ಎರಡು ಬಸ್ ಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. 10 ಮಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

      ಘಟನೆ ಕುರಿತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿಷಾದ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ.   

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap