ಹೊಸದಿಲ್ಲಿ:
ಬಾಲಿವುಟ್ ನಟ ಸನ್ನಿ ಡಿಯೋಲ್ ಮಂಗಳವಾರ ಭಾರತೀಯ ಜನತಾ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ದೆಹಲಿಯಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿಗೆ ಆಗಮಿಸಿದ ಸನ್ನಿ ಡಿಯೋಲ್ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಪಿಯೂಷ್ ಗೋಯಲ್ ಅವರ ಸಮ್ಮುಖದಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡರು.
Delhi: Actor Sunny Deol joins Bharatiya Janata Party in presence of Union Ministers Piyush Goyal and Nirmala Sitharaman pic.twitter.com/QgXwv5OrBI
— ANI (@ANI) April 23, 2019
ಬಿಜೆಪಿ ಪಕ್ಷದ ಹಿರಿಯ ನಾಯಕಿ ನಿರ್ಮಲಾ ಸೀತಾರಾಮನ್ ನಟ ಸನ್ನಿ ಡಿಯೋಲ್‌ರನ್ನು ಪಕ್ಷಕ್ಕೆ ಸ್ವಾಗತಿಸಿದರು. ನಮ್ಮ ಪಕ್ಷಕ್ಕೆ ಫೈಯರ್‌ಬ್ರಾಂಡ್ ನಟನನ್ನು ಸ್ವಾಗತಿಸಲು ಸಂತೋಷವಾಗುತ್ತಿದೆ ಎಂದರು.
”ನನ್ನ ತಂದೆ(ಚಿತ್ರತಾರೆ ಧರ್ಮೇಂದ್ರ)ಅಟಲ್‌ಜಿಗೆ ಪ್ರಭಾವಿತರಾದ್ದಂತೆ ಇಂದು ನಾನು ಮೋದಿಜಿಗೆ ಮನಸೋತು ಬಿಜೆಪಿಗೆ ಸೇರುತ್ತಿದ್ದೇನೆ. ಬಿಜೆಪಿಗೆ ಎಷ್ಟು ಕೊಡುಗೆ ನೀಡಬೇಕೋ ಅಷ್ಟು ನೀಡುವೆ. ನಾನು ಮಾತನಾಡಲಾರೆ. ಕೆಲಸ ಮಾಡಿ ತೋರುತ್ತೇನೆ” ಎಂದು ಡಿಯೋಲ್ ಪ್ರತಿಕ್ರಿಯಿಸಿದರು.
ಮೂಲಗಳ ಪ್ರಕಾರ ಡಿಯೋಲ್ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಚಂಡಿಗಢ ಅಥವಾ ಗುರುದಾಸ್‌ಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಈ ಕುರಿತು ಇನ್ನಷ್ಟೇ ಬಿಜೆಪಿಯಿಂದ ಅಧಿಕೃತ ಘೋಷಣೆಯಾಗಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
