ಅಮೇಠಿ:
ಸ್ಮೃತಿ ಇರಾನಿ ಪರ ಭರ್ಜರಿ ಪ್ರಚಾರ ಮಾಡಿದ್ದ ಬಿಜೆಪಿ ಕಾರ್ಯಕರ್ತನನ್ನ ಗುಂಡಿಟ್ಟು ಹತ್ಯೆ ಮಾಡಲಾಗಿದೆ.ಬಾರೂಲಿಯಾ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಸುರೇಂದ್ರ ಸಿಂಗ್ ಹತ್ಯೆಯಾದ ವ್ಯಕ್ತಿ. ನಿನ್ನೆಯಷ್ಟೆ ಸ್ಮೃತಿ ಇರಾನಿ ಅವರ ಗೆಲುವಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಬಂದು ರಾತ್ರಿ ಮನೆ ಹೊರಗಡೆ ಮಲಗಿದ್ದರು.
ಬೆಳಗಿನ ಜಾವ ಬಂದ ದುಷ್ಕರ್ಮಿಗಳು ಸುರೇಂದ್ರ ಸಿಂಗ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಈಗಾಗಲೆ ಕೆಲವು ಶಂಕಿತರನ್ನ ವಶಕ್ಕೆ ಪಡೆದಿದ್ದು, ಹಳೆ ದ್ವೇಷ ಅಥವಾ ರಾಜಕೀಯ ದ್ವೇಷಕ್ಕಾಗಿ ಹತ್ಯೆ ನಡೆದಿರಬಹುದು ಎಂದು ಅಮೇಠಿ ಎಸ್ಪಿ, ರಾಜೇಶ್ ಕುಮಾರ್ ತಿಳಿಸಿದ್ದಾರೆ.
Amethi: Surendra Singh, former village head of Baraulia village under Jamo police station limits, was shot dead by unidentified assailants at his residence, last night. More details awaited. pic.twitter.com/Z40mUXmPUw
— ANI UP (@ANINewsUP) May 26, 2019
ಆದ್ರೆ ಸ್ಥಳಿಯರು ಹೇಳುಪ ಪ್ರಕಾರ ಸುರೇಂದ್ರ ಸಿಂಗ್ ಸ್ಮೃತಿ ಇರಾನಿ ಬೆಂಬಲಿಗಿಗನಾಗಿದ್ದು, ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸಿದ್ದರು. ರಾಜಕೀಯ ಕಾರಣದಿಂದಲೇ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧೆ ಮಾಡಿದ್ದ ಕೇಂದ್ರ ಸಚಿವೆ ಸೃತಿ ಇರಾನಿ ರಾಹುಲ್ ಗಾಂಧಿಯನ್ನ ಸೋಲಿಸಿ ಭರ್ಜರಿ ಜಯಗಳಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
