ರಷ್ಯಾ :
ಎಐಬಿಎ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊತ್ತ ಮೊದಲ ಪುರುಷ ಬಾಕ್ಸರ್ ಎಂಬ ದಾಖಲೆಗೆ ಭಾರತದ ಯುವ ಪ್ರತಿಭಾವಂತ ಬಾಕ್ಸರ್ ಅಮಿತ್ ಫಂಗಲ್ ಪಾತ್ರವಾಗಿದ್ದಾರೆ.
ರಷ್ಯಾದ ಎಕಟೆರಿನ್‌ಬರ್ಗ್‌ನಲ್ಲಿ ನಡೆದ 52 ಕೆ.ಜಿ. ವಿಭಾಗದ ಸೆಮಿಫೈನಲ್ ಮುಖಾಮುಖಿಯಲ್ಲಿ ಖಜಕಸ್ತಾನದ ಸಕೆನ್ ಬಿಬೊಸಿನೋವ್ ವಿರುದ್ಧ 3-2ರ ಅಂತರದಲ್ಲಿ ಗೆದ್ದು ಇತಿಹಾಸ ರಚಿಸಿದ ಅಮಿತ್ ಫಂಗಲ್ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ.
ಒಟ್ಟಿನಲ್ಲಿ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಅಥವಾ ಬೆಳ್ಳಿ ಪದಕ ಗೆಲ್ಲಲಿರುವ ಭಾರತದ ಮೊದಲ ಪುರುಷ ಬಾಕ್ಸರ್ ಎಂಬ ಹಿರಿಮೆಗೆ ಪಾತ್ರವಾಗಲಿದ್ದಾರೆ.