ಅಮರಾವತಿ:
ತಿರುಮಲ ತಿರುಪತಿ ದೇವಸ್ಥಾನಂ(ಟಿಡಿಪಿ) ಮಂಡಳಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಶುಕ್ರವಾರ ತಮ್ಮ ಚಿಕ್ಕಪ್ಪ, ವೈಎಸ್ ಆರ್ ಸಿಪಿಯ ಮುಖಂಡ ವೈವಿ ಸುಬ್ಬಾ ರೆಡ್ಡಿ ಅವರನ್ನು ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ .
ವೈ.ವಿ.ಸುಬ್ಬಾರೆಡ್ಡಿ ನೇಮಕಾತಿಗೆ ಸಂಬಂಧಿಸಿದಂತೆ ವಿಶೇಷ ಪ್ರಧಾನ ಕಾರ್ಯದರ್ಶಿ ಮನಮೋಹನ್ ಸಿಂಗ್ ಅವರು ಈ ಸಂಬಂಧ ಸರ್ಕಾರಿ ಆದೇಶ (ಜಿಒ) ಹೊರಡಿಸಿದ್ದಾರೆ. ವೈಎಸ್ಆರ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸುಬ್ಬಾರೆಡ್ಡಿ ಟಿಟಿಡಿ ಅಧ್ಯಕ್ಷರಾಗಿ ಇಂದು ಹನ್ನೊಂದು ಗಂಟೆಗೆ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.
ನೂತನ ಅಧ್ಯಕ್ಷರ ಹೆಸರು ಪ್ರಕಟವಾಗುತ್ತಿದ್ದಂತೆಯೇ, ಅವರು ಹಿಂದೂ ಸಮುದಾಯದವರಲ್ಲ ಎನ್ನುವ ಸುಳ್ಳು ಸುದ್ದಿ ಹರಡಿ, ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಲು ಆರಂಭಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸುಬ್ಬಾರೆಡ್ಡಿ, ನಾನು ಹಿಂದೂವಾಗಿಯೇ ಹುಟ್ಟಿದ್ದು, ಸಾಯುವುದು ಕೂಡಾ ಎಂದು ಹೇಳಿದ್ದಾರೆ.