ನವದೆಹಲಿ :
ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ದೇಶದ ಮೂರೂ ಸಶಸ್ತ್ರ ಪಡೆಗಳಿಗೆ (ಭೂಸೇನೆ, ನೌಕಾಸೇನೆ, ವಾಯುಸೇನೆ) ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ.
ಕೆಲವೇ ದಿನಗಳ ಹಿಂದೆ ಸ್ಥಾಪಿಸಲಾದ ರಕ್ಷಣಾ ಮುಖ್ಯಸ್ಥರ ಹುದ್ದೆಯನ್ನು ಮೊದಲ ಬಾರಿಗೆ ಜನರಲ್ ರಾವತ್ ಅಲಂಕರಿಸಲಿದ್ದಾರೆ. ಸಿಡಿಎಸ್ ಮಿಲಿಟರಿಗೆ ಸಂಬಂಧಿಸಿದ ವಿಷಯಗಳಲ್ಲಿ ಕೇಂದ್ರ ಸರಕಾರ ಕೇಂದ್ರ ಸರಕಾರ ಅಡ್ವೈಸರ್ ಆಗಿ ಕಾರ್ಯನಿರ್ವಹಿಸುತ್ತಾರೆ. ಭಾರತೀಯ ಭೂ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯ ನಡುವಿನ ಸಂವಹನದಲ್ಲಿ ಇವರ ಕೆಲಸ ಬಹು ಮುಖ್ಯವಾಗಿರುತ್ತದೆ.
ಜನರಲ್ ರಾವತ್ ಅವರನ್ನು ಡಿಸೆಂಬರ್ 31, 2016 ರಂದು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು ಮತ್ತು ನಾಳೆ ಅವರು ನಿವೃತ್ತರಾಗಲಿದ್ದಾರೆ. ಆದಾಗ್ಯೂ, ಅವರು ಈಗ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಿ ತಮ್ಮ ಸೇವೆಯನ್ನು ಮುಂದುವರಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ