ಸಿಯಾಚಿನ್ ನಲ್ಲಿ ಹಿಮಪಾತ : 4 ಮಂದಿ ಯೋಧರು ಸೇರಿ 6 ಸಾವು!!

ನವದೆಹಲಿ :

       ದೊಡ್ಡ ಪ್ರಮಾಣದಲ್ಲಿ ಹಿಮಪಾತ ಸಂಭವಿಸಿ ನಾಲ್ವರು ಯೋಧರು, ಇಬ್ಬರು ಪೋರ್ಟರ್ ಸೇರಿ 6 ಮಂದಿ ಸಾವನ್ನಪ್ಪಿರುವ ದುರ್ಘಟನೆ ಲಡಾಖ್ ನ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ನಡೆದಿದೆ.

      ಸೋಮವಾರ ಮಧ್ಯಾಹ್ನ 3:30 ರ ವೇಳೆಗೆ ಹಿಮಪಾತ ಸಂಭವಿಸಿದ್ದು, ಯೋಧರೂ ಸೇರಿ 8 ಮಂದಿ ಸಿಲುಕಿದ್ರು. ಈ ಪೈಕಿ ನಾಲ್ವರು ಯೋಧರು ಹಾಗೂ ಇಬ್ಬರು ಹಮಾಲಿಗಳು ಸೇರಿ 6 ಮಂದಿ ಮೃತಪಟ್ಟಿದ್ದಾರೆ. ಇನ್ನಿಬ್ಬರನ್ನ ರಕ್ಷಿಸಲಾಗಿದ್ದು, ಸಮೀಪದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

      6 ಯೋಧರು ಹಾಗೂ ಇಬ್ಬರು ಹಮಾಲಿಗಳು ಒಂದು ಪೋಸ್ಟ್​​ನಿಂದ ಇನ್ನೊಂದು ಪೋಸ್ಟ್​​ಗೆ ಹೋಗುತ್ತಿದ್ದಾಗ ಸುಮಾರು 19 ಸಾವಿರ ಅಡಿಯ ಎತ್ತರದಲ್ಲಿ ಹಿಮಪಾತದಲ್ಲಿ ಸಿಲುಕಿದ್ರು. ಕೂಡಲೇ ಹತ್ತಿರದ ಪೋಸ್ಟ್ ಬಳಿ ಇದ್ದ ರಕ್ಷಣಾ ತಂಡ ಧಾವಿಸಿತ್ತಾದ್ರೂ, ಪ್ರಯೋಜನವಾಗಿಲ್ಲ. 

      ಸೇನೆಯ ಮೂಲಗಳ ಪ್ರಕಾರ 8 ಸೇನಾ ಸಿಬ್ಬಂದಿ ಗಸ್ತು ತಿರುಗುವ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ರಕ್ಷಣಾ ಕಾರ್ಯ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap