ಜೋರ್‌ಹಟ್:
ಅಸ್ಸಾಂನಲ್ಲಿ ನಿನ್ನೆ ಸಂಭವಿಸಿದ ಕಳ್ಳಬಟ್ಟಿ ಕುಡಿತ ದುರಂತದಲ್ಲಿ ಮಡಿದವರ ಸಂಖ್ಯೆ 114 ಮುಟ್ಟಿದೆ ಎಂದು ಇತ್ತೀಚಿನ ಮಾಹಿತಿ ತಿಳಿಸಿದೆ.
ಘಟನೆಯಿಂದ 300ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಅಸ್ವಸ್ಥರಾಗಿರುವವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿ ಕಾಡಿದೆ.
ಈ ನಡುವೆ ಪ್ರತಿ 10 ನಿಮಿಷಕ್ಕೆ ಒಬ್ಬರಂತೆ ಅಸ್ವಸ್ಥರ ಸಾವಿನ ಸುದ್ದಿ ಹೊರಬೀಳುತ್ತಿದೆ ಎಂದು ಜೋರ್‌ಹಟ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಕಳ್ಳಬಟ್ಟಿ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಅಸ್ಸಾಮ್ ಸರಕಾರವು 2 ಲಕ್ಷ ರೂ ಪರಿಹಾರ ಒದಗಿಸಿದೆ. ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರಿಗೆ ಚಿಕಿತ್ಸೆಗೆಂದು 50 ಸಾವಿರ ರೂ ಸಹಾಯವನ್ನೂ ಒದಗಿಸಿದೆ. ಇದೇ ವೇಳೆ, ಕಳ್ಳಬಟ್ಟಿ ದುರಂತ ಪ್ರಕರಣದ ತನಿಖೆಗೆ ಸರಕಾರ ಆದೇಶಿಸಿದೆ.
ಇದೇ ವೇಳೆ, ಕಳ್ಳಬಟ್ಟಿ ದುರಂತ ಪ್ರಕರಣದ ತನಿಖೆಗೆ ಸರಕಾರ ಆದೇಶಿಸಿದೆ. ಸಲ್ಮಾರ ಪ್ರದೇಶದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಈ ಪ್ರಕರಣ ಸಂಬಂಧ ಈವರೆಗೆ 12ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ