ಗೌಹಾತಿ:
ಇಲ್ಲಿನ ತೀನ್ ಸುಖಿಯಾ ಜಿಲ್ಲೆಯಲ್ಲಿರುವ ತೈಲ ಬಾವಿಯೊಂದರಲ್ಲಿ ಸ್ಫೋಟಗೊಂಡಿದ್ದು ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.
ಮೇ 27ರಂದು ಈ ಘಟನೆ ನಡೆದಿದ್ದು ಅಂದಿನಿಂದ ಸುಮಾರು 14 ದಿನಗಳಿಂದ ಈ ತೈಲ ಬಾವಿಯಲ್ಲಿ ಅನಿಲ ಸೋರಿಕೆ ಉಂಟಾಗುತ್ತಿತ್ತು. ಇಂದು ಈ ಪ್ರದೇಶದಲ್ಲಿ ಭಾರೀ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿಕೊಂಡಿದೆ.
ಈ ಬೆಂಕಿಯ ತೀವ್ರತೆ ಸುಮಾರು ಎರಡು ಕಿಲೋಮೀಟರ್ ಗಳಷ್ಟು ದೂರಕ್ಕೆ ಕಾಣಿಸುವಷ್ಟು ತೀವ್ರ ಸ್ವರೂಪದ್ದಾಗಿದೆ ಎನ್ನಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಜನರನ್ನು ಬೇರೆ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ