ದೆಹಲಿ:
ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಬರೋಬ್ಬರಿ 800 ಕೆ.ಜಿ ತೂಕದ ಹಿಂದೂಗಳ ಪವಿತ್ರ ಗಂಥವಾದ ಭಗವದ್ಗೀತೆಯನ್ನು ದೆಹಲಿಯ ಇಸ್ಕಾನ್ ದೇವಾಲಯದ ಆವರಣದಲ್ಲಿ ಅನಾವರಣಗೊಳಿಸಲಿದ್ದಾರೆ.
670 ಪುಟಗಳು, 800 ಕೆ.ಜಿ. ತೂಕವಿರುವ ‘ಬೃಹತ್ ಭಗವದ್ಗೀತಾ’ (Astounding Bhagavad Gita) ಎಂದು ಇಸ್ಕಾನ್ ಹೆಮ್ಮೆಯಿಂದ ಕರೆದಿರುವ ಈ ಗ್ರಂಥವು 2.8 ಮೀಟರ್ (9.18 ಅಡಿ) ಉದ್ದ ಮತ್ತು 2 ಮೀಟರ್ (6.5 ಅಡಿ) ಅಗಲವಿದೆ.
ವಿಶೇಷವಾಗಿ ಈ ಭಗವದ್ಗೀತೆಯ ಕಾಗದವು ವಾಟರ್ ಪ್ರೂಫ್ ಆಗಿದ್ದು, ಈ ಪವಿತ್ರ ಗ್ರಂಥವು 18 ಅತ್ಯುತ್ಕೃಷ್ಟ ಚಿತ್ರಗಳು ಮತ್ತು ಸುಂದರ ವಿನ್ಯಾಸವಿರುವ ಈ ಪುಸ್ತಕವನ್ನು ಇಟಲಿಯ ಮಿಲಾನ್‌ನಲ್ಲಿ ಮುದ್ರಿಸಲಾಗಿದೆ.
ಉಕ್ಕಿನ ಸ್ಕ್ರೂಗಳಿಂದ ಭದ್ರಗೊಳಿಸಿದ ಕಾರ್ಬನ್ ಫೈಬರ್‌ನ ರಕ್ಷಾಪುಟವನ್ನು ಜಪಾನ್ ತಂತ್ರಜ್ಞಾನ ಬಳಸಿ ಪುಸ್ತಕಕ್ಕೆ ಹೊದೆಸಲಾಗಿದೆ. ರಕ್ಷಾಪುಟದ ಮೇಲಿರುವ ಕೃಷ್ಣಾರ್ಜುನರ ಆಕರ್ಷಕ ವರ್ಣಚಿತ್ರವನ್ನು ಚಿನ್ನ–ಬೆಳ್ಳಿಯಂಥ ಅಮೂಲ್ಯ ಲೋಹಗಳು ಮತ್ತು ಹರಳುಗಳಿಂದ ಅಲಂಕರಿಸಲಾಗಿದೆ.
ಬೃಹತ್ ಗ್ರಂಥಕ್ಕೆ ಸುಮಾರು 1.5 ಕೋಟಿ ಖರ್ಚಾಗಿದೆ. ಈ ಮೊತ್ತವನ್ನು ವಿಶ್ವದ ವಿವಿಧ ದೇಶಗಳ ದಾನಿಗಳ ನೆರವಿನಿಂದ ಇಸ್ಕಾನ್‌ನ ಇಟಲಿ ಘಟಕ ಭರಿಸಿದೆ. ವಿಶ್ವದೆಲ್ಲೆಡೆ ಸುಮಾರು 400 ಕ್ಕೂ ಹೆಚ್ಚು ಕೃಷ್ಣ ದೇಗುಲ ಹಾಗೂ 100ಕ್ಕೂ ಹೆಚ್ಚು ಸಸ್ಯಾಹಾರಿ ರೆಸ್ಟೊರೆಂಟ್ ಗಳನ್ನು ಇಸ್ಕಾನ್ ಸಂಸ್ಥೆ ನಡೆಸುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ