ಚೀನಾದಲ್ಲಿ ಭೂಕಂಪ : 12 ಮಂದಿ ಸಾವು!!!

ಬೀಜಿಂಗ್:

    ಚೀನಾದ ಸಿಚುವಾನ್ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೂಕಂಪದಲ್ಲಿ 12 ಜನ ಮೃತರಾಗಿದ್ದಾರೆ.

     ಪ್ರಬಲ(6.0)ಭೂಕಂಪಕ್ಕೆ 12 ಮಂದಿ ಸಾವಿಗೀಡಾಗಿದ್ದು, 134 ಜನರಿಗೆ ಗಾಯವಾಗಿದೆ. ಕಟ್ಟಡದ ಅವಶೇಷಗಳಿಂದ ಮೃತದೇಹಗಳನ್ನು ಹೊರ ತೆಗೆಯುವ, ಗಾಯಗೊಂಡವರನ್ನು ರಕ್ಷಿಸುವ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

      ಸೋಮವಾರ ರಾತ್ರಿ ಸುಮಾರು 10:55(ಸ್ಥಳೀಯ ಕಾಲಮಾನ) ಕ್ಕೆ ಸುಮಾರು 16 ಕಿಮೀ ಆಳದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪನದಲ್ಲಿ 6.0 ತೀವ್ರತೆ ದಾಖಲಾಗಿತ್ತು.

      ಭೂಕಂಪನದ ಬಳಿಕ 4,000ಕ್ಕೂ ಅಧಿಕ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಡಜನ್‌ಗಟ್ಟಲೆ ಕಟ್ಟಡಗಳು ಹಾನಿಗೊಂಡಿವೆ ಅಥವಾ ಧ್ವಂಸವಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.

      ಭೂಕಂಪದಿಂಗಾಗಿ ಹಲವು ಮನೆಗಳು, ಕಟ್ಟಡಗಳು ಕುಸಿದಿವೆ. ರಸ್ತೆಗಳು ಹಾನಿಗೀಡಾಗಿದ್ದು ಸಂಚಾರ ಸಾಧ್ಯವಾಗುತ್ತಿಲ್ಲ. ಪ್ರಮುಖ ಹೆದ್ದಾರಿಗಳನ್ನು ಬಂದ್‌ ಮಾಡಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap