ಶಬರಿಮಲೆ ದರ್ಶನಕ್ಕೆ ತೆರಳಿದ್ದ ಮಾಲಾಧಾರಿ ನಿಧನ!!

ಚಿಕ್ಕಮಗಳೂರು : 

      ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಓರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಶಬರಿ ಮಲೆಯಲ್ಲಿ ನಡೆದಿದೆ.

      ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಲಕ್ಷಾಂತರ ಮಂದಿ ಹೋಗುತ್ತಾರೆ. ಪ್ರತಿ ವರ್ಷವೂ ಸ್ವಾಮಿಯ ದರ್ಶನಕ್ಕೆ ಜನ ಕಾತುರರಾಗಿರುತ್ತಾರೆ.

      ಹೌದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದ ಗಿರೀಶ್ ಮಾಲೆ ಧರಿಸಿ ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದರು. ಈ ವೇಳೆ ಅಪ್ಪಚ್ಚಿ ಬೆಟ್ಟದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಇನ್ನು ಇವರ ದೇಹವನ್ನು ಸ್ವಗ್ರಾಮಕ್ಕೆ ತರಲಾಗುತ್ತಿದೆ ಎನ್ನಲಾಗಿದೆ. ಒಟ್ನಲ್ಲಿ ಅಯ್ಯಪ್ಪ ದರ್ಶನಕ್ಕೆ ಎಂದು ತೆರಳಿದ್ದ ಗಿರೀಶ್ ದೇವರ ಪಾದ ಸೇರಿದ್ದಾರೆ.

       ಲಕ್ಷಾಂತರ ಮಂದಿ ಒಂದೆಡೆ ಸೇರುವುದರಿಂದ ಈ ಹಿಂದೆ ಕಾಲ್ತುಳಿತ ಘಟನೆಗಳೂ ನಡೆದಿವೆ. ಹಾಗಾಗಿ ಹೆಚ್ಚಿನ ಭದ್ರತೆಯನ್ನೂ ಬರುವ ಭಕ್ತಾದಿಗಳಿಗೆ ನೀಡಲಾಗಿದೆ. ಇದೀಗ ಅಯ್ಯಪ್ಪ ಮಾಲಾಧಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ