ಹೈದರಾಬಾದ್:
ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಬ್ಯಾಡ್ಮಿಂಟನ್ ಆಟಗಾರ ಪಾರುಪಲ್ಲಿ ಕಶ್ಯಪ್ ಅವರನ್ನು ವರಿಸಲು ತೀರ್ಮಾನಿಸಿದ್ದಾರಂತೆ.
ದೇಶದ ಪ್ರಖ್ಯಾತ ಬ್ಯಾಡ್ಮಿಂಟನ್ ಮಿಶ್ರ ಜೋಡಿ ಸೈನಾ (28) ಮತ್ತು ಪರುಪಳ್ಳಿ ಕಶ್ಯಪ್ (32) ನಡುವೆ ಪ್ರೀತಿಪ್ರೇಮವಿದೆ ಎಂಬ ಗುಸುಗುಸು ಮಾತಿಗೆ ತೆರೆ ಬಿದ್ದಿದ್ದು ನಿಜ ಜೀವನದಲ್ಲಿಯೂ ಈ ಇಬ್ಬರು ಆಟಗಾರರು ಒಂದಾಗಲಿದ್ದಾರೆ.
ಸೈನಾ ಒಲಂಪಿಕ್ಸ್ನಲ್ಲಿ ಎರಡು ಬಾರಿ, ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ಗಳಲ್ಲಿ ಗೆದ್ದು ಪದಕಗಳನ್ನು ಪಡೆದವರು. ಕಶ್ಯಪ್ ಕೂಡ ಕಾಮನ್ವೆಲ್ತ್ನಲ್ಲಿ ಚಿನ್ನದ ಪದಕ ಪುರಸ್ಕೃತರು. ಸೈನಾ ಹಾಗೂ ಕಶ್ಯಪ್ ಮದುವೆ ಮಾಡಲು ಅವರ ಕುಟುಂಬಗಳೇ ಪ್ಲಾನ್ ಮಾಡಿದ್ದವು ಎನ್ನಲಾಗಿದೆ.
ಡಿಸೆಂಬರ್ 16ಕ್ಕೆ ಮಧುವೆ ನಿಗದಿಯಾಗುವ ಸಾಧ್ಯತೆಗಳಿವೆ. ಇದೊಂದು ಖಾಸಗಿ ಸಮಾರಂಭವಾಗಿರಲಿದ್ದು ಹತ್ತಿರದ ಸ್ನೇಹಿತರು ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗುವುದು ಮತ್ತು ಡಿಸೆಂಬರ್ 21ಕ್ಕೆ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ಸ್ಟಾರ್ ಜೋಡಿಯ ಹತ್ತಿರದ ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
