ಒಂದು ವರ್ಷ ಪಾನ್ ಮಸಾಲ, ಗುಟ್ಕಾ ಬಳಕೆ ನಿಷೇಧ!!

ನವದೆಹಲಿ :

     ಒಂದು ವರ್ಷದ ವರೆಗೆ ಪಾನ್ ಮಸಾಲ, ಗುಟ್ಕಾ ಸೇವನೆಗೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ನಿಷೇಧ ಹೇರಿದೆ.

      ದೆಹಲಿಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ 2006ರ ಆಹಾರ ಮತ್ತು ಸುರಕ್ಷತಾ ಗುಣಮಟ್ಟ ಕಾಯ್ದೆ ಸೆಕ್ಷನ್ 30ರ ಅನ್ವಯ ಪಾನ್ ಮಸಾಲ ಬಳಕೆ ನಿಷೇಧ ಹಾಕಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

     ಸರ್ಕಾರದ ಆದೇಶದಂತೆ ಉತ್ಪಾದನೆ ಹಾಗೂ ಮಾರಾಟ ಮಾತ್ರವಲ್ಲದೆ, ಶೇಖರಿಸಿಟ್ಟುಕೊಳ್ಳಲು ಕೂಡಾ ಸದ್ಯಕ್ಕೆ ಅನುಮತಿ ಇಲ್ಲ ಎಂದು ಆಹಾರ ಮತ್ತು ಔಷಧಿ ಪ್ರಾಧಿಕಾರದ ಡಿಎನ್ ಸಿಂಗ್ ಹೇಳಿದ್ದಾರೆ.

     ದೆಹಲಿಯಲ್ಲಿ ಗುರುವಾರ ಒಂದೇ ದಿನ 1652 ಕೊರೊನಾವೈರಸ್ ದಾಖಲಾಗಿದೆ. ಗುಣಮುಖರಾಗುವವರ ಪ್ರಮಾಣ ಶೇ 82ಕ್ಕೇರಿದೆ. 41 ಮಂದಿ ಮೃತಪಟ್ಟಿದ್ದು, ಒಟ್ಟಾರೆ, 1,16,993 ಪ್ರಕರಣಗಳು ದಾಖಲಾಗಿದ್ದು, 3487 ಮಂದಿ ಮೃತಪಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap