ಬೆಂಗಳೂರು :
ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡ ಇಂದು ಅರುಣಾಚಾಲ ಪ್ರದೇಶ ಮಾಜಿ ಸಿಎಂ ಗೆಗಾಂಗ್ ಅಪಾಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಎಲ್ಲ ಪ್ರಾದೇಶಿಕ ಪಕ್ಷಗಳು ಒಟ್ಟುಗೂಡಿದ್ದು ಈ ಸಂಬಂಧ ಪ್ರಾದೇಶಿಕ ಪಕ್ಷಗಳ ಮಾತುಕತೆ ನಡೆಯುತ್ತಲೆ ಇದೆ. ಆಯಾ ರಾಜ್ಯಗಳ ಪಕ್ಷಗಳ ಜೊತೆ ಒಟ್ಟುಗೂಡುತ್ತ ಬಿಜೆಪಿ ಮಣಿಸಲು ಪ್ರಾದೇಶಿಕ ಪಕ್ಷಗಳು ನಿರ್ಧರಿಸಿದ್ದು, ಈ ಸಂಬಂಧವಿವಿಧ ಪಕ್ಷಗಳ ನಾಯಕರ ಮಾತುಕತೆ ನಡೆಯುತ್ತಲೆ ಇದೆ. ಈ ಮೂಲಕ ಪ್ರಾದೇಶಿಕ ಪಕ್ಷಗಳ ನಡುವೆ ಸಮನ್ವಯವನ್ನು ಗಟ್ಟಿಗೊಳಿಸುವ ಕಾರ್ಯ ಕೂಡ ನಡೆಯುತ್ತಿದೆ.

ಇತ್ತೀಚೆಗಷ್ಟೇ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತಡ ನಡೆಸಿದ್ದರು. ಈ ವೇಳೆ ಮಹಾ ಮೈತ್ರಿ ಕುರಿತು ನಾಯಕರು ಚರ್ಚಿಸಿದ್ದರು.
ಗೆಗಾಂಗ್ ಅಪಾಂಗ್ ಕಾಂಗ್ರೆಸ್ ಬಿಟ್ಟು ಯುಡಿಎಫ್ ಎಂಬ ಪಕ್ಷ ಕಟ್ಟಿ ಬಳಿಕ ವಾಪಸ್ ಕಾಂಗ್ರೆಸ್ ಸೇರಿ ಸಿಎಂ ಆಗಿದ್ದರು. ಅದಾದ ಬಳಿಕ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು.ಈಗಿನ ಬಿಜೆಪಿ ಮಾಜಿ ಪ್ರಧಾನಿ ವಾಜಪೇಯಿ ಅವರ ಸಿದ್ಧಾಂತಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿ ಕಳೆದ ಜನವರಿಯಲ್ಲಿ ಬಿಜೆಪಿಯನ್ನೂ ತೊರೆದಿದ್ದರು.
ಇಂದು ಅವರನ್ನು ಭೇಟಿ ದೇವೇಗೌಡ ಭೇಟಿ ಮಾಡಿದ್ದು ಮಾತುಕತೆ ನಡೆಸಿದ್ದಾರೆ. ಈ ವೇಳೆ ಜೆಡಿಎಸ್ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಕೂಡ ಉಪಸ್ಥಿತರಿದ್ದರು.








