
ಬೆಂಗಳೂರಿನಲ್ಲಿ ಮೊದಲ ಬೈಕ್ ಮಳಿಗೆಗೆ ಚಾಲನೆ ದೊರೆತಿದೆ. ವಾರದೊಳಗೆ ದೇಶಾದ್ಯಂತ ಸುಮಾರು 20 ಮಳಿಗೆಗಳು ತಲೆ ಎತ್ತಲಿವೆ. ಬೈಕ್ ಪ್ರಿಯರ ಬೇಡಿಕೆ ಹೆಚ್ಚಾಗುತ್ತಿದ್ದು, ಅಗತ್ಯಕ್ಕೆ ಅನುಗುಣವಾಗಿ ಪೂರೈಸಲು ಕಂಪನಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಜಾವಾ ಬೈಕ್ ಖರೀದಿಸುವ ಆಸಕ್ತರು 9 ತಿಂಗಳು ಕಾಯಬೇಕಾಗಿದೆ
ಪ್ರಸ್ತುತ ಮಧ್ಯಪ್ರದೇಶದ ಪ್ರಿಥಮ್ಪುರ್ನಲ್ಲಿ ಮಾತ್ರವೇ ಬೈಕ್ ತಯಾರಿಸಲಾಗುತ್ತಿದೆ. ಇದರಿಂದ ಬೇಡಿಕೆ ಇರುವಷ್ಟು ಪೂರೈಸಲು ಕಂಪನಿಗೆ ಸಾಧ್ಯ ಆಗುತ್ತಿಲ್ಲ. ಮುಂಗಡವಾಗಿ ಕಾಯ್ದಿರಿಸಿದ ಗ್ರಾಹಕರಿಗೆ ಕಂತಿನ ಪ್ರಕಾರ ವಿತರಣೆ ಮಾಡಲು ಕಂಪನಿ ಮುಂದಾಗಿದೆ ಎನ್ನಲಾಗುತ್ತಿದೆ.
ಬೈಕ್ ಖರೀದಿಗೆ 5,000 ಮುಂಗಡ ಪಾವತಿ ನಿಗದಿಪಡಿಸಲಾಗಿದೆ. ವಾರದ ಹಿಂದೆ 1 ಲಕ್ಷಕ್ಕೂ ಅಧಿಕ ಬುಕಿಂಗ್ ಆರ್ಡರ್ ಬಂದಿದೆ. ಇಷ್ಟೊಂದು ಬೈಕ್ಗಳನ್ನು ಪೂರೈಸಲು ಕಂಪನಿಗೆ ಕನಿಷ್ಠ 9 ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಬೇಡಿಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಕಾಯುವಿಕೆ ಅವಧಿ ತಗ್ಗಿಸಲು ನಿನ್ನೆಯಿಂದ (ಡಿ.25) ಆನ್ಲೈನ್ ಬುಕಿಂಗ್ ಸೇವೆಯನ್ನು ಕಂಪನಿ ಸ್ಥಗಿತಗೊಳಿಸಿದೆ. . ಮೊದಲು ಬುಕ್ ಮಾಡಿದ್ದವರಿಗೆ ಮಾರ್ಚ್ನಲ್ಲಿ ವಿತರಣೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
