ಹೊಸ ವರ್ಷದ ಪಾರ್ಟಿ ಎಲ್ಲೆಂದರಲ್ಲಿ ಮಾಡಿದರೆ ಕಠಿಣ ಕ್ರಮ : ಮೇಯರ್ ಗಂಗಾಂಬಿಕೆ!!

ಬೆಂಗಳೂರು  :

   ಹೊಸ ವರ್ಷದ ಪಾರ್ಟಿ ಎಲ್ಲೆಂದರಲ್ಲಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದ್ದಾರೆ. ಡಿಸೆಂಬರ್ 31 ರ ರಾತ್ರಿ ರಸ್ತೆಗಳಲ್ಲಿ ಪೆಂಡಾಲ್ ಹಾಕಿ ಪಾರ್ಟಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಹೊಸ ವರ್ಷ ಆಚರಣೆಗೆ ಕಡ್ಡಾಯವಾಗಿ ಬಿಬಿಎಂಪಿಯಿಂದ ಅನುಮತಿ ಪಡೆಯಲೇಬೇಕಾಗಿದೆ.

  ಎಲ್ಲೆಲ್ಲೋ ಕುಣಿದು ಕುಪ್ಪಳಿಸುವಂತಿಲ್ಲ ಹೊಸ ವರ್ಷದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರವಹಿಸಿದೆ. ಎಲ್ಲಾ ಮೇಲ್ಸೇತುವೆ ಮೇಲೆ ಡಿ.31ರಂದು ಸಂಜೆ 6ರಿಂದ ಜನವರಿ ಬೆಳಗ್ಗೆ ಗಂಟೆಯವರೆಗೆ ಮುಚ್ಚಲಾಗುತ್ತದೆ. ಸುಮಾರು 15 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

   ಬೆಂಗಳೂರಿನ ಎಲ್ಲಾ ಮೇಲ್ಸೇತುವೆಗಳು ಹಾಗೂ ಎಂಜಿ ರಸ್ತೆ ವ್ಯಾಪ್ತಿ ಡಿಸೆಂಬರ್ 31ರ ಮಧ್ಯಾಹ್ನ 3ರಿಂದ ಜನವರಿ 1ರ ಬೆಳಗ್ಗೆ 6ರವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗುತ್ತದೆ. ಹೂಸವರ್ಷ ಆಚರಣೆ ಮತ್ತಿನಲ್ಲಿ ಕೆಲವರು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಾರೆ. ಇದರಿಂದ ಮೇಲ್ಸೇತುವೆಗಳಲ್ಲಿ ಅಪಘಾತಕ್ಕೂ ಕಾರಣವಾಗಬಹುದು . ಇನ್ನು ಕೆಲವು ಕಿಡಿಗೇಡಿಗಳು ಆಚರಣೆ ನೆಪದಲ್ಲಿ ಪಾನಮತ್ತರಾಗಿ ವಾಹನಗಳನ್ನು ಅಡ್ಡಾದಿಡ್ಡಿ ಚಲಾಯಿಸಿ ನಾಗರಿಕರಿಗೆ ತೊಂದರೆ ಕೊಡುವ ಸಾಧ್ಯತೆಗಳಿವೆ  ಎಂದು ಮೇಯರ್ ಗಂಗಾಂಬಿಕೆ
ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap