ಆಂಜನೇಯ ಸ್ವಾಮಿ ವಿದ್ಯಾ ಸಂಸ್ಥೆಗೆ ವಾಟರ್ ಫೀಲ್ಟರ್ ನೀಡಿದ ವಿಕ್ಟೋರಿಯ ಆಸ್ಪತ್ರೆಯ ಡಾ.ಸಿಎಂ ರಾಜೇಶ್

ಬರಗೂರು :

  ಮನುಷ್ಯನಿಗೆ ಶುದ್ದ ಕುಡಿಯುವ ನೀರು ಅತಿ ಮುಖ್ಯವಾದ ಅಂಶ ಇದನ್ನು ಮನಗೊಂಡು ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಅನುಕೋಲವಾಗುವ ಉದ್ದೇಶದಿಂದ ಇಂದು ನಮ್ಮ ತಾಲ್ಲೂಕಿನ ಶಾಲೆಗಳಿಗೆ ಕುಡಿಯುವ ನೀರಿನ ಫೀಲ್ಟರ್‍ನ್ನು ನೀಡುತ್ತಿದ್ದೇನೆ ಎಂದು ವಿಕ್ಟೋರಿಯ ಆಸ್ಪತ್ರೆಯ ಡಾ.ಸಿಎಂ ರಾಜೇಶ್ ಗೌಡ ತಿಳಿಸಿದರು

ಸಿರಾ ತಾಲ್ಲೂಕು ಬರಗೂರು ಗ್ರಾಮದ ಆಂಜನೇಯ ಸ್ವಾಮಿ ವಿದ್ಯಾ ಸಂಸ್ಥೆಗೆ ವಿಕ್ಟೋರಿಯ ಆಸ್ಪತ್ರೆಯ ಡಾ.ಸಿಎಂ ರಾಜೇಶ್ ಗೌಡರವರು ನೀಡಿದ ವಾಟರ್ ಫೀಲ್ಟರ್ ನೀಡಿ ಮಾತನಾಡಿದರು
ಸುರಕ್ಷೀತ ಕುಡಿಯುವ ನೀರಿನಿಂದ ಮಕ್ಕಳು ಇಂದು ವಂಚಿತರಾಗಿದ್ದಾರೆ, ಆಶುದ್ದ ಕುಡಿಯವ ನೀರಿನಿಂದ ಹಲವು ಖಾಯಿಲೆಗಳಿ ತುತ್ತಾಗಿ ಸಾವಿಗಿಡುಗುತ್ತಿದ್ದಾರೆ,ಸರ್ಕಾರ ಹಾಗೂ ಧರ್ಮಸ್ಥಳದ ವೀರೇಂದ್ರ ಹೆಗಡೆಯವರು ಸಹ ಸಾಕಷ್ಟು ಕಡೇ ಗಳಲ್ಲಿ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಿವೆ ನಾನು ಸಹ ನನ್ನ ಭಾಗದ ಶಾಲಾ ಮಕ್ಕಳಿಗೆ ಶುದ್ದ ನೀರಿನ ಘಟಕವನ್ನು ಕಲ್ಪಿಸಲು ಸಣ್ಣ ಪ್ರಯತ್ನ ಮಾಡಿದ್ದೇನೆ,ಪ್ರಚಾರದ ಪ್ರಯತ್ನ ಅಲ್ಲ ನಾನೋಬ್ಬ ವೈಧ್ಯನಾಗಿ ನನ್ನ ಮನತೃತಿಗಾಗಿ ಎಂದರು.

   ಆಂಜನೇಯ ಸ್ವಾಮಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಹಾಲಗುಂಡೇಗೌಡ ಮಾತನಾಡಿ ನಮ್ಮ ಸಿರಾ ತಾಲ್ಲೂಕಿನ ಗೌಡಗೆರೆ,ಹುಲಿಕುಂಟೆ ಹೋಬಳಿಯಲ್ಲಿ ಅಂತರ್‍ಜಲ ಮಟ್ಟ ತೀವ್ರನೇ ಪಾತಳಕ್ಕೆ ಹೋಗಿ ಪ್ಲೋರೆಡ್‍ನ ಆಶುದ್ದ ನೀರನ್ನು ಕುಡಿದು ನಾವು ಸಾಕಷ್ಟು ಖಾಯಿಲೆಗಳಿಂದ ಬಳಲುತ್ತಿದ್ದೇವೆ, ಶಾಲೆಗಳಿಗೆ ನೀಡಲು ಬಂದಿರುವ ಡಾ.ರಾಜೇಶ್ ಗೌಡರು ಮುಂದೆ ಬಂದಿರುವುದು ನಮಗೆ ಸಂತೋಷ ತಂದಿದೆ, ಅಂತೆಯೇ ಇಲ್ಲಿನ ಸರ್ಕಾರಿ ಶಾಲೆಗೂ ಕಲ್ಪಸಲಿದ್ದಾರೆ.

   ಈ ಸಮಾರಂಭದಲ್ಲಿ ಸಮಾಜ ಸೇವಕ ತಾವರೆಕೆರೆ ದೇವರಾಜು, ಸಂಸ್ಥೆಯ ಅಧ್ಯಕ್ಷ ಪ್ರಕಾಶ್‍ಗೌಡ, ಖಜಾಂಜಿ ಪಾಂಡುರಂಗಪ್ಪ,ದೇವರಾಜು, ರೈತ ಸಂಘದ ಅಧ್ಯಕ್ಷ ಲಕ್ಷ್ಮಣಗೌಡ,ಕರವೇ ಅಧ್ಯಕ್ಷ ಲತೀಫ್,ಭೂತರಾಜು ಸತೀಶ್, ಪತ್ರಕರ್ತ ವಲಿಸಾಬ್‍ಬರಗೂರು, ಶಾಲೆಯ,ಕಾಲೇಜಿನ ಪ್ರಾಂಶುಪಾಲರು,ಉಪನ್ಯಾಸಕರು, ಶಿಕ್ಷಕರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap