ಬೆಂಗಳೂರು :
ಕಾಂಗ್ರೆಸ್ನ ಕೆಲವು ಶಾಸಕರು ಮುಂಬೈ ಮತ್ತು ನವದೆಹಲಿಯಲ್ಲಿದ್ದಾರೆ. ಅವರನ್ನು ನೇರವಾಗಿ ರಾಜಭವನಕ್ಕೆ ಕರೆದುಕೊಂಡು ಬರಲು ಬಿಜೆಪಿ ಸಿದ್ಧತೆ ನಡೆಸಿದೆ. ಆ ಮೂಲಕ ಈ ಮೊದಲೇ ಹೇಳಿದಂತೆ ಸಂಕ್ರಾಂತಿಯ ನಂತರ ತಮ್ಮ ಸರ್ಕಾರ ರಚನೆ ಮಾಡಲು ತಂತ್ರ ರೂಪಿಸಿದೆ ಎಂಬ ಸುದ್ದಿಗಳು ಹರಡಿದ್ದವು. ಆಪರೇಷನ್ ಕಮಲದ ಬಿಸಿ ತಟ್ಟುತ್ತಿದ್ದಂತೆ ನಿನ್ನೆ ರಾತ್ರಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಬೆಂಗಳೂರಿಗೆ ಧಾವಿಸಿದ್ದು, ಇಂದು ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ ಮುಂತಾದ ನಾಯಕರ ಜೊತೆಗೆ ಸಭೆ ನಡೆಸಿದ ಕಾರ್ಯತಂತ್ರ ರೂಪಿಸಲಿದ್ದಾರೆ
ಸಚಿವ ಡಿ.ಕೆ. ಶಿವಕುಮಾರ್ ಕೂಡ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ನ ಯಾವ ಶಾಸಕರೂ ಬಿಜೆಪಿಯವರ ಜೊತೆಗಿಲ್ಲ. ಮೈತ್ರಿ ಸರ್ಕಾರ ಬೀಳಿಸೋದು ಬಿಜೆಪಿಯ ಭ್ರಮೆ. ಕಾಂಗ್ರೆಸ್ನ ಯಾವ ಶಾಸಕರೂ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ನಮ್ಮ ಶಾಸಕರನ್ನು ಬಿಡಿಸಿಕೊಂಡು ಬರುವುದು ಹೇಗೆಂದು ನಮಗೆ ಗೊತ್ತು. ಆ ಸಾಮರ್ಥ್ಯ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕರು ತಮ್ಮ ಜೊತೆಗಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದು ಅವರ ಹತಾಶೆಯನ್ನು ತೋರಿಸುತ್ತಿದೆ. ತಾವು ಹೇಳಿದ ಹಾಗೆ ಯಾವುದೇ ಕ್ರಾಂತಿಯಾಗಲಿಲ್ಲವಲ್ಲ ಎಂದು ಹೀಗೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ನ ಯಾವ ಶಾಸಕರೂ ಬಿಜೆಪಿ ಜೊತೆಗಿಲ್ಲ. ಮೈತ್ರಿ ಸರ್ಕಾರವನ್ನು ಅಭದ್ರಗೊಳಿಸುತ್ತೇವೆ ಎಂದು ಹೇಳುತ್ತಿರುವುದು ಬಿಜೆಪಿಯ ಭ್ರಮೆ ಅಷ್ಟೆ. ನಮ್ಮ ಶಾಸಕರನ್ನು ಎಲ್ಲೇ ಕೂಡಿಹಾಕಿದ್ದರೂ ಅವರನ್ನು ಬಿಡಿಸಿಕೊಂಡು ಬರುವುದು ಹೇಗೆಂದು ನನಗೆ ಗೊತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ