ಕುಮಾರಕೃಪಾ ಗೆಸ್ಟ್ ಹೌಸ್ನಲ್ಲಿ ಡಿಸಿಎಂ ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲುವು ನಾಯಕರ ಜೊತೆಗೆ ಚರ್ಚೆ ಮುಂದುವರೆಸಿದ್ದಾರೆ.
ಕಾಂಗ್ರೆಸ್ನ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬುದೆಲ್ಲ ವದಂತಿ ಎಂದು ಹೇಳಿರುವ ಕಾಂಗ್ರೆಸ್ ನಾಯಕರು ಬಿಜೆಪಿ ಹಗಲುಗನಸು ಕಾಣುತ್ತಿದೆ. ನಮ್ಮ ಸರ್ಕಾರ ಸುಭದ್ರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ನ ಕೆಲವು ಶಾಸಕರು ಮುಂಬೈ ಮತ್ತು ನವದೆಹಲಿಯಲ್ಲಿದ್ದಾರೆ. ಅವರನ್ನು ನೇರವಾಗಿ ರಾಜಭವನಕ್ಕೆ ಕರೆದುಕೊಂಡು ಬರಲು ಬಿಜೆಪಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಆ ಮೂಲಕ ಈ ಮೊದಲೇ ಹೇಳಿದಂತೆ ಸಂಕ್ರಾಂತಿಯ ನಂತರ ತಮ್ಮ ಸರ್ಕಾರ ರಚನೆ ಮಾಡಲು ತಂತ್ರ ರೂಪಿಸಿದೆ ಎಂಬ ಸುದ್ದಿಗಳು ಹರಡಿದ್ದವು.