ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಗುಪ್ತಾಂಗದಲ್ಲಿ ಸಾಗಿಸುತ್ತಿದ್ದ 4.4 ಕೆಜಿ ಚಿನ್ನ ವಶ

   ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ಸುಡಾನ್ ದೇಶದ ಮಹಿಳೆಯ ಗುಪ್ತಾಂಗದಲ್ಲಿ 1.3 ಕೆಜಿ ಚಿನ್ನ ಮತ್ತು ಜರ್ಮನ್ ಪಾಸ್ ಪೋರ್ಟ್ ಹೊಂದಿದ್ದ ವ್ಯಕ್ತಿಯ ಶಾರ್ಟ್ಸ್ ನಲ್ಲಿ 1.4 ಕೆ.ಜಿ ಗೋಲ್ಡ್ ಬಿಸ್ಕೆಟ್ ಪತ್ತೆ ಹಚ್ಚುವಲ್ಲಿ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅದೇ ರೀತಿ ಬ್ಯಾಂಕಾಕ್​​ನಿಂದ ಬೆಂಗಳೂರಿಗೆ ಬಂದ ವಿಮಾನದ ಸೀಟಿನ ಕೆಳಗೆ 1.2 ಕೆ.ಜಿ. ಚಿನ್ನ  ಪತ್ತೆಯಾಗಿದೆ. ಗುದದ್ವಾರದಲ್ಲಿ ಚಿನ್ನ ಸಾಗಿಸಿದ್ದ ಕೇರಳ ಮೂಲದ ವ್ಯಕ್ತಿಯಿಂದ 500 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. 
ಒಂದೇ ದಿನ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಮೂವರನ್ನು ಬಂಧಿಸಿದ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ