ಬೆಂಗಳೂರು:
ಐಪಿಎಸ್ ಅಧಿಕಾರಿ, ಡಿ. ರೂಪಾ ಅವರ ಇನ್ಸ್ಟಾಗ್ರಾಂ ಹೆಸರಿನ ಮೂಲಕ ಚಂದ ವಸೂಲಿ ಮಾಡುತ್ತಿರೋದು ಬೆಳಕಿಗೆ ಬಂದಿದೆ. ಬಡ ಹೆಣ್ಣು ಮಕ್ಕಳ ಏಳಿಗೆಗೆ ಸಹಾಯ ಮಾಡಿ ಎಂದು ವಂಚಕರ ಜಾಲವೊಂದು ರೂಪಾ ಅವರ ಹೆಸರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ, ಇನ್ಸ್ಟಾಗ್ರಾಂನ ಪೋಸ್ಟ್ ನೋಡಿ ಸಾರ್ವಜನಿಕರು ಮನಿ ಟ್ರಾನ್ಸ್ ಫರ್ ಆ್ಯಪ್ ಮೂಲಕ ಸಾವಿರಾರು ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ.
ಈ ಮಧ್ಯೆ, ಚಂದಾ ಸಂಗ್ರಹಣೆ ಬಗ್ಗೆ ಸಾರ್ವಜನಿಕರು ರೂಪಾರನ್ನ ಹಾಡಿ ಹೊಗಳಿದ್ದಾರೆ. ಆದ್ರೆ, ಇನ್ಸ್ಟಾಗ್ರಾಂನಲ್ಲಿ ಚಂದಾ ಸಂಗ್ರಹಣೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿರೋ ಡಿ. ರೂಪಾ ಈ ಕುರಿತಂತೆ ಸ್ಪಷ್ಟತೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಾನು ಯಾವುದೇ ಇನ್ಸ್ಟಾಗ್ರಾಂ ಖಾತೆ ಹೊಂದಿಲ್ಲ. ಸಾರ್ವಜನಿಕರು ಹಣ ನೀಡಿ ವಂಚಿತರ ಜಾಲಕ್ಕೆ ಬೀಳದಂತೆ ಮನವಿ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಕೊಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ